

ಬಾಕ್ಸಾಫೀಸ್ ದಾಖಲೆಗಳನ್ನೆಲ್ಲಾ ನುಚ್ಚು ನೂರು ಮಾಡಿ ಮುನ್ನುಗ್ಗುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಎರಡು ಭಾಗದ ತೆಲುಗು ಚಲನಚಿತ್ರ ಬಾಹುಬಲಿ ಟ್ವಿಟ್ಟರ್ ನಲ್ಲಿ ವಿವಾದಕ್ಕೊಳಗಾಗಿದೆ.
ಸಿನೆಮಾದಲ್ಲಿ ಬುಡಕಟ್ಟು ಸಮುದಾಯದ ಕೆಟ್ಟ ರೀತಿಯ ಚಿತ್ರಣವನ್ನು ಟೀಕಿಸಿರುವ ಹಿರಿಯ ಪತ್ರಕರ್ತ ಶೇಖರ್ ಗುಪ್ತ "ಬಾಹುಬಲಿಯಲ್ಲಿ ಬುಡಕಟ್ಟಿನವರನ್ನು ಅತಿ ಕೆಟ್ಟದಾಗಿ ಚಿತ್ರಿಸಲಾಗಿದೆ. ಕಡುಗಪ್ಪು, ಕಪ್ಪಿಟ್ಟ ಮುಖ, ಕಪ್ಪು ಹಲ್ಲುಗಳು" ಎಂದು ಟ್ವೀಟ್ ಮಾಡಿ ನಿರ್ದೇಶಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ.