
ಸ್ಯಾಂಡಲ್ ವುಡ್ ನ ನಿರ್ದೇಶಕ ಎಸ್.ನಾರಾಯಣ್ ಅವರನ್ನು ನಿರ್ದೇಶಕ, ನಟ, ಬರಹ, ಸಂಯೋಜನೆ ಮತ್ತು ನಿರ್ಮಾಣ ಹೀಗೆ ವಿವಿಧ ವೃತ್ತಿಯಲ್ಲಿ ನೋಡಿದ್ದೀರ, ಹಲವರಿಗೆ ಗೊತ್ತಿಲ್ಲದ ವಿಷಯವೇನೆಂದರೆ ಅವರು ಇತ್ತೀಚೆಗೆ ಚಿತ್ರ ವಿತರಣೆಯ ಕೆಲಸವನ್ನೂ ಪ್ರಾರಂಭಿಸಿದ್ದಾರೆ.
ಬಹುಮುಖಪ್ರತಿಭೆ ಎಸ್. ನಾರಾಯಣ್, ತಮಿಳಿನ ಬಹುನಿರೀಕ್ಷಿತ 'ಪುಲಿ' ಚಿತ್ರದ ವಿತರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಕರ್ನಾಟಕದಲ್ಲಿ ಪುಲಿ ಚಿತ್ರದ ವಿತರಣೆ ಮಾಡಲು ಸುದೀಪ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂಬುದೂ ಒಂದು ಕಾರಣವಾಗಿದೆ. 130 ಕೋಟಿ ರೂಪಾಯಿ ವೆಚ್ಚದಲ್ಲಿ ಪುಲಿ ಚಿತ್ರ ನಿರ್ಮಾಣವಾಗಿದ್ದು ವಿಜಯ್, ಶ್ರೀದೇವಿ, ಆದಿತ್ಯ, ಪ್ರಭು, ಶ್ರುತಿ ಹಾಸನ್, ಹನ್ಸಿಕ, ನಂದಿತ ಶ್ವೇತ ಮುಂತಾದ ತಾರಾಗಣವನ್ನು ಹೊಂದಿದೆ.
ಬಾಹುಬಲಿ ಚಿತ್ರದಲ್ಲಿ ಯೋಧನ ಪಾತ್ರ ಮಾಡಿದ್ದ ಸುದೀಪ್, ಪುಲಿ ಚಿತ್ರದಲ್ಲೂ ಮಿಂಚಿದ್ದಾರೆ. ಸುದೀಪ್ ವಿರುದ್ಧದ ಪಾತ್ರದಲ್ಲಿ ವಿಜಯ್ ಅಭಿನಯಿಸಿರುವುದು ಪುಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ
Advertisement