ಕಾಮಾಕ್ಷಿಯಾಗಿ ಸನ್ನಿ ಲಿಯೋನ್!

ಒಂದು ಕಾಲದ ನೀಲಿ ಚಿತ್ರಗಳ ತಾರೆ, ಬಾಲಿವುಡ್‍ನಲ್ಲಿ ಅತ್ಯಂತ ಬೇಡಿಕೆಯ ನಟಿ ಸನ್ನಿ ಲಿಯೋನ್ ಇದೀಗ `ಕಾಮಾಕ್ಷಿ'ಯಾಗಿ ಕನ್ನಡಿಗರ ಹೃದಯದ ಬಾಗಿಲು ಬಡಿಯಲು ಬಂದಿದ್ದಾರೆ...
ನಟಿ ಸನ್ನಿ ಲಿಯೋನ್ (ಸಂಗ್ರಹ ಚಿತ್ರ)
ನಟಿ ಸನ್ನಿ ಲಿಯೋನ್ (ಸಂಗ್ರಹ ಚಿತ್ರ)
Updated on

ಒಂದು ಕಾಲದ ನೀಲಿ ಚಿತ್ರಗಳ ತಾರೆ, ಬಾಲಿವುಡ್‍ನಲ್ಲಿ ಅತ್ಯಂತ ಬೇಡಿಕೆಯ ನಟಿ ಸನ್ನಿ ಲಿಯೋನ್ ಇದೀಗ `ಕಾಮಾಕ್ಷಿ'ಯಾಗಿ ಕನ್ನಡಿಗರ ಹೃದಯದ ಬಾಗಿಲು ಬಡಿಯಲು ಬಂದಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ `ಲವ್ ಯೂ ಆಲಿಯಾ' ಚಿತ್ರದಲ್ಲಿ ಸನ್ನಿಯ ಐಟಂ ಸಾಂಗ್ ಚಿತ್ರೀಕರಣಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದಾರೆ.

ಸೃಜನ್ ಲೋಕೇಶ್ ಜತೆ ಸನ್ನಿ ಲಿಯೋನ್ ಸೊಂಟ ಬಳುಕಿಸಲಿದ್ದಾರಂತೆ. `ಕಾಮಾಕ್ಷಿ ಕಾಮಾಕ್ಷಿ, ನೀನೇನಾ ಸ್ವರ್ಗದಲ್ಲಿ ಊರ್ವಶಿ' ಎಂಬ ಐಟಂ ಹಾಡಿಗೆ ಸನ್ನಿ ಹೆಜ್ಜೆ ಹಾಕುತ್ತಿದ್ದಾರೆ. ಸನ್ನಿ ಲಿಯೋನ್ ಕನ್ನಡಿಗರಿಗೆ ಪರಿಚಯ ವಾಗುತ್ತಿರುವುದು ಇದು ಮೊದಲೇನಲ್ಲ. ಹಾಗೆ ನೋಡಿದರೆ ಸನ್ನಿಗೆ ಕನ್ನಡದಲ್ಲಿ ಇದು ಎರಡನೇ ಸಿನೆಮಾ. ಕಳೆದ ವರ್ಷ ಬಿಡುಗಡೆಯಾದ ಪ್ರೇಮ್ ಅವರ `ಡಿಕೆ' ಚಿತ್ರದಲ್ಲಿ `ಬಾಗಿಲು ತೆರೆಯೇ ಸೇಸಮ್ಮ' ಹಾಡಿಗೆ ಕುಣಿದು ಹೋಗಿದ್ದರು. ಈಗ ಇಂದ್ರಜಿತ್ ಲಂಕೇಶ್, ಚಂದನ್ ನಾಯಕರಾಗಿರುವ `ಲವ್ ಯೂ ಆಲಿಯಾ' ಚಿತ್ರಕ್ಕೆ ಸನ್ನಿ ಲಿಯೋನ್‍ರನ್ನ ಕರೆದುಕೊಂಡು ಬಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com