

ಬೆಂಗಳೂರು: ತಮ್ಮ ಮುಂದಿನ ಸಿನೆಮ 'ದನ ಕಾಯೋನು' ಸಿನೆಮಾಗೆ ನಿರ್ದೇಶಕ ಯೋಗರಾಜ್ ಭಟ್ ಚಿತ್ರೀಕರಣವನ್ನು ಮುಂದಿನ ತಿಂಗಳಿಂದ ಪ್ರಾರಂಬಿಸಲಿದ್ದು, ನಟಿ ಪ್ರಿಯಾಮಣಿಯವರ ಮೊದಲ ನೋಟವನ್ನು ಬಿಡುಗಡೆ ಮಾಡಿದ್ದಾರೆ. ಈ ಸಿನೆಮಾದ ನಾಯಕ ನಟ ದುನಿಯಾ ವಿಜಯ್. ಇಡೀ ಸಿನೆಮಾ ಗ್ರಾಮೀಣ ಸೊಗಡಿನಲ್ಲಿ ಚಿತ್ರೀಕರಣವಾಗಲಿದೆ ಎನ್ನಲಾಗಿದೆ.
ಸದ್ಯಕ್ಕೆ ಚಿತ್ರೀಕರಣಕ್ಕೆ ಸ್ಥಳಗಳ ಹುಡುಕಾಟದಲ್ಲಿದ್ದಾರೆ ಯೋಗರಾಜ್ ಭಟ್. ಗಂಗಾವತಿ, ಚಿತ್ರದುರ್ಗ, ಕನಕಪುರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಈ ಮಧ್ಯೆ ವಿ ಹರಿಕೃಷ್ಣ ಅವರು ಸಂಗೀತ ನೀಡಲಿದ್ದು ಅವರೊಂದಿಗೆ ಯೋಗರಾಜ್ ಕೆಲಸ ಮಾಡುತ್ತಿದ್ದಾರೆ ಹಾಗೂ ಗೀತ ರಚನೆಯಲ್ಲೂ ನಿರತರಾಗಿದ್ದರಂತೆ.
ವಾಸ್ತು ಪ್ರಕಾರ ಯಾಕೋ ಯೋಗರಾಜ್ ಭಟ್ ಅವರಿಗೆ ದಿಕ್ಕು ಬದಲಿಸಲಿಲ್ಲ. ಈಗ 'ದನ ಕಾಯೋನು' ಚಿತ್ರೀಕರಣ ಸ್ಥಳಗಳು ಯೋಗರಾಜ್ ಭಟ್ ಅವರಿಗೆ ಮ್ಯಾಜಿಕ್ ಮಾಡಲಿ ಎನ್ನುವುದೇ ಸಿನಿ ರಸಿಕರ ಹಾರೈಕೆ.