ಪವಿತ್ರಾ ಲೊಕೇಶನ್ ಶಿಫ್ಟ್
ಮೈಸೂರು ಲೋಕೇಶ್ ಪುತ್ರಿ ಪವಿತ್ರಾ ಲೋಕೇಶ್ ಕನ್ನಡ ಸಿನಿಮಾಗಳಲ್ಲಿ ಕಾಣಿಸುತ್ತಿಲ್ಲ. ಅವಕಾಶವಿಲ್ಲದೆ ಮನೇಲಿ ಕೂತಿದ್ದೀರಾ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಗ್ರೇಟ್ ಆಂಧ್ರ ಡಾಟ್ ಕಾಮ್ ವೆಬ್‍ಸೈಟ್ ಒಂದು ಸುದ್ದಿ ಪ್ರಕಟಿಸಿದೆ.
ಟಾಲಿವುಡ್‍ನ ಅತ್ಯಂತ ಬ್ಯುಸಿ ಆಂಟಿ ಪವಿತ್ರಾ ಲೋಕೇಶ್ ಎಂಬ ತಲೆಬರಹದ ಈ ಸುದ್ದಿಯಲ್ಲಿ ಪವಿತ್ರಾ ಲೋಕೇಶ್ ಸದ್ಯಕ್ಕೆ ಏನು ಮಾಡುತ್ತಿದ್ದಾರೆಂಬುದಕ್ಕೆ ಉತ್ತರವಿದೆ.
ಸೌಂದರ್ಯ ಮತ್ತು ಪ್ರತಿಭೆ ಇದ್ದರೂ ಕನ್ನಡ ಚಿತ್ರ ರಂಗದಲ್ಲಿ ನಿರ್ಲಕ್ಷಕ್ಕೊಳಗಾಗಿ ಚಿಕ್ಕಪುಟ್ಟ ಪಾತ್ರಗಳಿಗೆ ಸೀಮಿತರಾಗಿ, ಸೀರಿಯಲ್ಲು ಗಳತ್ತ ಮುಖ ಮಾಡಿ ಆಮೇಲೆ ನಾಪತ್ತೆಯಾಗಿದ್ದ ಪವಿತ್ರಾಗೆ ಟಾಲಿವುಡ್‍ನಲ್ಲಿ ಡಿಮ್ಯಾಯಂಡೋ ಡಿಮ್ಯಾಡಂತೆ.
ಅಲ್ಲಿನ ದೊಡ್ಡ ದೊಡ್ಡ ಚಿತ್ರನಿರ್ದೇಶಕರು ಪವಿತ್ರಾಗಾಗಿ ತಾಯಿ, ಆಂಟಿ ಪಾತ್ರಗಳ ಆಫರ್ ಇಟ್ಟುಕೊಂಡು ಕ್ಯೂ ನಿಂತಿದ್ದಾರಂತೆ. ಕಳೆದ ಎರಡು ವರ್ಷಗಳಲ್ಲಿ ಪವಿತ್ರಾ ನಸೀಬೇ ಬದಲಾಗಿ ಹೋಗಿದೆ ಎನ್ನುವ ಟಾಲಿವುಡ್ ವೆಬ್‍ಸೈಟ್ ಪ್ರಕಾರ, ತೆಲುಗಿನ ಹೆಸರಾಂತ ಪೋಷಕ ನಟಿಯರ ಅವಕಾಶಗಳೆಲ್ಲ ಪವಿತ್ರಾ ಅಕೌಂಟಿಗೆ ಜಾರುತ್ತಿವೆಯಂತೆ. ಪವಿತ್ರಾ ನಟಿಸಿದ್ದ ಮಳ್ಳಿ ಮಳ್ಳಿ ಇದಿ ರಾಣಿ ರೋಜು ಮತ್ತು ಲಕ್ಷ್ಮೀ ರಾವೇ ಮಾ ಇಂಟಿಕಿ ಚಿತ್ರಗಳ ನಂತರ ಪವಿತ್ರಾ ಅಲ್ಲಿನ ಸಿನಿಪ್ರೇಮಿಗಳ ಫೇವರಿಟ್ ಆಗಿಹೋಗಿದ್ದಾರಂತೆ! ತೆಲುಗು ಸೀರಿಯಲ್ ಮೂಲಕ ಟಾಲಿವುಡ್ ಎಂಟ್ರಿ ಪಡೆದು ಹಿಟ್ ಆಗಿರುವ ಪವಿತ್ರಾಳ ಭಾವನಾತ್ಮಕ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರಂತೆ. ಹಿತ್ತಲ ಗಿಡ ಮದ್ದಲ್ಲ ಅನ್ನೋದು ಇದಕ್ಕೇನಾ?.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ