ಚೆನ್ನೈ-ಲಂಡನ್ ಲೋಕಲ್ ಟ್ರೈನ್

ಚಿನ್ನ ಚಿನ್ನ ಆಸೆ ಎಂಬ ಹೆಸರಿಟ್ಟುಕೊಂಡು ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಆಚರಿಸಿಕೊಂಡಿದ್ದ ಚಿತ್ರ ಅಂದು ಪತ್ರಿಕಾಗೋಷ್ಠಿಯಲ್ಲಿ ಶೀರ್ಷಿಕೆಯ ವಿಷಯಕ್ಕೆ ವಿರೋಧ ಎದುರಿಸಿತ್ತು.
ಲೋಕಲ್ ಟ್ರೈನ್
ಲೋಕಲ್ ಟ್ರೈನ್
Updated on

ಚಿನ್ನ ಚಿನ್ನ ಆಸೆ ಎಂಬ ಹೆಸರಿಟ್ಟುಕೊಂಡು ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಆಚರಿಸಿಕೊಂಡಿದ್ದ ಚಿತ್ರ ಅಂದು ಪತ್ರಿಕಾಗೋಷ್ಠಿಯಲ್ಲಿ ಶೀರ್ಷಿಕೆಯ ವಿಷಯಕ್ಕೆ ವಿರೋಧ ಎದುರಿಸಿತ್ತು.

ತಮಿಳು ಶೀರ್ಷಿಕೆ ಇಟ್ಟಿರುವುದಕ್ಕೆ ಸರಿಯಾದ ಸಮರ್ಥನೆ ನೀಡದೆಯೇ, ಒರಟೊರಟಾಗಿ ಪ್ರತಿಕ್ರಿಯಿಸಿದ್ದ ತಂಡ, ಈಗ ದಿಢೀರ್ ಶೀರ್ಷಿಕೆ ಬದಲಾಯಿಸಿಕೊಂಡಿದೆ. ಹಾಗಂತ ಅಚ್ಚಕನ್ನಡದ ಶೀರ್ಷಿಕೆನ್ನೇನೂ ಇಟ್ಟುಕೊಂಡಿಲ್ಲ. ಚಿತ್ರದ ಹೊಸ ಹೆಸರು ಲೋಕಲ್ ಟ್ರೈನ್ ಆಗಲೂ ಚಿತ್ರಕ್ಕೆ ಸೂಟ್ ಆಗುತ್ತೆ ಅಂತ ಚಿನ್ನ ಚಿನ್ನ ಆಸೆ ಎಂಬ ಹೆಸರಿಟ್ಟಿದ್ದೀವಿ ಅಂದಿದ್ದ ನಿರ್ದೇಶಕರು ಈಗ ಲೋಕಲ್ ಟ್ರೈನ್ ಎಂಬ ಹೆಸರಿಗೂ ಅದೇ ವಿವರಣೆ ನೀಡುತ್ತಿದ್ದಾರೆ.

ಚಿತ್ರದ ನಿರ್ದೇಶಕರು ಎಸ್. ರುದ್ರಮುನಿ. ಕಥೆ ಚಿತ್ರಕಥೆ ಕೂಡ ಅವರದ್ದೇ, ಮದರಂಗಿ ಕೃಷ್ಣ ನಾಯಕನಾಗಿರುವ ಈ ಚಿತ್ರದಲ್ಲಿ ಸುಚೇಂದ್ರಪ್ರಸಾದ್ ಗೆ ಒಂದು ವಿಶೇಷ ಪಾತ್ರವಿದೆ ಎಂದು ಚಿತ್ರ ತಂಡದವರಿಂದ ಕೇಳಿಬರುತ್ತಿದೆ. ಎಸ್ತರ್ ನರೋನಾ ನಾಯಕಿಯಾಗಿರುವ ಈ ಚಿತ್ರ ಸದ್ಯಕ್ಕೆಕ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಮುಹೂರ್ತದ ನಂತರ ಎಲ್ಲ ಚಿತ್ರೀಕರಣ ಮುಗಿಸಿ ಹಾಡಿಗೋಸ್ಕರ ಮತ್ತೆ ಕಂಠೀರವಕ್ಕೆ ಕಾಲಿಟ್ಟಿರುವ ಲೋಕಲ್ ಟ್ರೈನ್, ಜಯಂತ್ ಕಾಯ್ಕಿಣಿ ಬರೆದಿರುವ ಸನಿಹ ಸನಿಹ ನೋಡುತ್ತಿದ್ದರೆ ನೀನು ನೋಡುತ್ತಿದ್ದರೆ ಎಂಬ ರೊಮ್ಯಾಂಟಿಕ್ ಗೀತೆಯ ಚಿತ್ರೀಕರಣ ನಡೆಯುತ್ತಿದೆ.

ಚಿತ್ರಕ್ಕೆ ಅರ್ಜುನ್ ಜನ್ ಸಂಗೀತವಿದ್ದರೆ, ನಾಗೇಂದ್ರ ಪ್ರಸಾದ್ ಕೂಡ ಗೀತರಚನೆ ಮಾಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಲೋಕಲ್ ಟ್ರೈನ್ ತೆರೆಮೇಲೆ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com