'ಮದುವೆಯ ಮಮತೆಯ ಕರೆಯೋಲೆ'ಗೆ ಕವಿರಾಜ್ ಸಿದ್ಧತೆ

ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಕವಿರಾಜ್ ಅವರು 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ನಿರ್ದೇಶನದತ್ತ ಆಸಕ್ತಿ ತೋರಿದ್ದಾರೆ.
ಮದುವೆಯ ಮಮತೆಯ ಕರೆಯೋಲೆ ಚಿತ್ರತಂಡ
ಮದುವೆಯ ಮಮತೆಯ ಕರೆಯೋಲೆ ಚಿತ್ರತಂಡ
Updated on

ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಕವಿರಾಜ್ ಅವರು 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ನಿರ್ದೇಶನದತ್ತ ಆಸಕ್ತಿ ತೋರಿದ್ದಾರೆ.

ದರ್ಶನ್ ಕುಟುಂಬದ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಈ ಮದುವೆಯ ಮಮತೆಯ ಕರೆಯೋಲೆ ಸಿದ್ಧವಾಗುತ್ತಿದ್ದು, ಚಿತ್ರೀಕರಣ ಇದೇ ಏಪ್ರಿಲ್ ನಿಂದ ಪ್ರಾರಂಭವಾಗಲಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಅಮೂಲ್ಯ ಮತ್ತು ನವ ನಾಯಕ ಸೂರಜ್ ಗೌಡ ನಟಿಸುತ್ತಿದ್ದು, ಈಗಾಗಲೇ ಒಂದು ಹಂತದ ಫೋಟೋಶೂಟ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಏಪ್ರಿಲ್ ಮೊದಲವಾರದಿಂದಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, 2016 ಏಪ್ರಿಲ್ ವೇಳೆಗೆ ಚಿತ್ರೀಕರಣ ಅಂತ್ಯವಾಗಲಿದೆ. 2016 ಡಿಸೆಂಬರ್ 24ರಂದು ಚಿತ್ರವನ್ನು ತೆರೆಗೆ ಯೋಜನೆ ಚಿತ್ರ ತಂಡದ್ದು.

ಕವಿರಾಜ್ ಹೊಸ ಚಿಂತನೆ ಮತ್ತು ಆಲೋಚನೆಗಳೊಂದಿಗೆ ಮದುವೆಯ ಮಮತೆಯ ಕರೆಯೋಲೆಯೊಂದಿಗೆ ಬಂದಿದ್ದಾರೆ. ಇದೇ ಏಪ್ರಿಲ್ ತಿಂಗಳ ಮೊದಲ ವಾರದಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು 2016 ಏಪ್ರಿಲ್ ವೇಳೆಗೆ ಅಂತ್ಯವಾಗಲಿದೆ. ಚಿತ್ರದಲ್ಲಿ ಅಮೂಲ್ಯ ಮತ್ತು ಸೂರಜ್ ಗೌಡ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರಕ್ಕೆ ನಿರ್ದೇಶಕ ಕವಿರಾಜ್ ಅವರು ಕೂಡ ಒಂದೆರಡು ಸಾಲಗಳನ್ನು ಬರೆದಿದ್ದಾರೆ ಎಂದು ನಿರ್ಮಾಪಕ ದಿನಕರ್ ತೂಗುದೀಪ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಚಿತ್ರವನ್ನು ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಕುರಿತು ಯೋಜನೆ ಹಾಕಿಕೊಂಡಿದ್ದು, ಇದೇ ನಿಟ್ಟಿನಲ್ಲಿ ಚಿತ್ರದ ಪ್ರಮೋಷನ್ ಕೂಡ ನಡೆಯಲಿದೆ ಎಂದು ದಿನಕರ್ ಹೇಳಿದರು. ಇದೇ ವೇಳೆ ಚಿತ್ರದ ಇತರೆ ತಾರಾಗಣದ ಕುರಿತು ಮಾಹಿತಿ ನೀಡಿದ ಅವರು, ಅಮೂಲ್ಯ ಅವರ ತಂದೆಯ ಪಾತ್ರದಲ್ಲಿ ಅನಂತ್ ನಾಗ್ ಅವರು ಅಭಿನಯಿಸುತ್ತಿದ್ದಾರೆ. ತಾಯಿ ಪಾತ್ರಕ್ಕಾಗಿ ಸುಧಾರಾಣಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಸೂರಜ್ ತಂದೆ ಪಾತ್ರದಲ್ಲಿ ಅಚ್ಯುತ ಅವರು ಅಭಿನಯಿಸುತ್ತಿದ್ದಾರೆ. ಹಾಸ್ಯ ಪಾತ್ರಕ್ಕೆ ಬುಲೆಟ್ ಪ್ರಕಾಶ್ ಮತ್ತು ಸಾಧುಕೋಕಿಲಾ ಅವರನ್ನು ಕರೆತರಲಾಗಿದೆ. ಇದಲ್ಲದೆ ಚಿತ್ರದ ಮತ್ತಷ್ಚು ಪ್ರಮುಖ ಪಾತ್ರಗಳಿಗಾಗಿ ನಟರನ್ನು ಹುಡುಕುತ್ತಿದ್ದೇವೆ ಎಂದು ದಿನಕರ್ ಹೇಳಿದರು.

ಬೇಗ ಚೇತರಿಸಿಕೊಳ್ಳುತ್ತೇನೆ: ಅಮೂಲ್ಯ
ಇನ್ನು ಇದೇ ಚಿತ್ರದ ಪಾತ್ರಕ್ಕಾಗಿ ಸ್ಕೂಟಿ ಓಡಿಸುವ ತರಬೇತಿ ಪಡೆಯುತ್ತಿದ್ದ ಚಿತ್ರದ ನಾಯಕಿ ಅಮೂಲ್ಯ ಅವರು ಕೆಳಗೆ ಬಿದ್ದು ಗಾಯಮಾಡಿಕೊಂಡಿದ್ದರು. ಪ್ರಸ್ತುತ ಅಮೂಲ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ವೈದ್ಯರು ಅಮೂಲ್ಯ ಅವರಿಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. "ಸ್ಕೂಟಿ ಓಡಿಸುವಾಗ ಕೆಳಗೆ ಬಿದ್ದು ಗಾಯವಾಗಿತ್ತು. ಸಣ್ಣ ಪೆಟ್ಟಾಗಿದೆ. ವೈದ್ಯರು 7 ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಬೇಗ ಗುಣಮುಖಳಾಗುವ ವಿಶ್ವಾಸ ನನ್ನಲಿದೆ" ಎಂದು ನಟಿ ಅಮೂಲ್ಯ ಹೇಳಿದ್ದಾರೆ. "ಪ್ರಸ್ತುತ ನಾನು 3 ಚಿತ್ರಗಳಿಗೆ ಸಹಿ ಹಾಕಿದ್ದು, ಮಳೆ ಚಿತ್ರದ ಪ್ರಮೋಷನ್ ನಡೆಯುತ್ತಿದೆ. ಏಪ್ರಿಲ್ 2ರಿಂದ ರಾಮಲೀಲಾ ಪ್ರಾರಂಭಗೊಳ್ಳುತ್ತಿದೆ. ಇದರ ನಡುವೆ ಕವಿರಾಜ್ ಅವರ ಮದುವೆಯ ಮಮತೆಯ ಕರೆಯೋಲೆ ಚಿತ್ರ ಸೆಟ್ಟೇರುತ್ತಿದೆ. ಆದರೆ ದುರಾದೃಷ್ಟವಶಾತ್ ನನಗೆ ಪೆಟ್ಟಾಗಿದೆ. ಶೀಘ್ರದಲ್ಲಿಯೇ ಚೇತರಿಸಿಕೊಂಡು ನನ್ನ ಕೆಲಸದಲ್ಲಿ ತೊಡಗುತ್ತೇನೆ" ಎಂದು ಅಮೂಲ್ಯ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com