ಕುಡಿತ ತ್ಯಜಿಸಿದ್ದು ನನ್ನ ಜೀವನ ಉಳಿಸಿತು: ಎಲ್ ಪಚಿನೋ

ಖ್ಯಾತ ಹಾಲಿವುಡ್ ನಟ ಎಲ್ ಪಚಿನೋ "ನನಗೆ ೭೦ರ ದಶಕದ ಘಟನೆಗಳು ಅಷ್ಟು ನೆನಪಿಲ್ಲ" ಎಂದಿದ್ದಾರೆ. ೧೯೭೨ ರಲ್ಲಿ ತಾವು ನಟಿಸಿದ್ದ ವಿಶ್ವ ವಿಖ್ಯಾತ ಚಲನಚಿತ್ರ 'ದ ಗಾಡ್ ಫಾದರ್' ಬಿಡುಗಡೆ ಕಂಡ
ಎಲ್ ಪಚಿನೋ
ಎಲ್ ಪಚಿನೋ

ಲಂಡನ್: ಖ್ಯಾತ ಹಾಲಿವುಡ್ ನಟ ಎಲ್ ಪಚಿನೋ "ನನಗೆ ೭೦ರ ದಶಕದ ಘಟನೆಗಳು ಅಷ್ಟು ನೆನಪಿಲ್ಲ" ಎಂದಿದ್ದಾರೆ.

೧೯೭೨ ರಲ್ಲಿ ತಾವು ನಟಿಸಿದ್ದ ವಿಶ್ವ ವಿಖ್ಯಾತ ಚಲನಚಿತ್ರ 'ದ ಗಾಡ್ ಫಾದರ್' ಬಿಡುಗಡೆ ಕಂಡ ನಂತರ ತಮ್ಮ ಮೇಲೆ ಕೇಂದ್ರೀಕೃತವಾಗಿದ್ದ ಗಮನ ಮತ್ತು ತದನಂತರ ನಡೆಸಿದ ಪ್ರಯಾಸದ ಹೋರಾಟದ ಬಗ್ಗೆ ಅವರು ಮಾತನಾಡಿದ್ದಾರೆ.

"ನನ್ನ ಮೇಲೆ ಎಲ್ಲ ಗಮನ ಕೇಂದ್ರೀಕೃತವಾಗಿದ್ದರಿಂದ ನನಗೆ ತೊಂದರೆಯಾಗಿತ್ತು" ಎಂದು ಅವರು ವಿವರಿಸಿದ್ದಾರೆ.

"ಹೌದು ನಾನು ಕುಡುಕನಾಗಿದ್ದೆ. ೭೦ರ ದಶಕದಲ್ಲಿ ನನ್ನ ವೃತ್ತಿಜೀವನ ಸ್ಫೋಟವಾಗಿತ್ತು. ಆದರೆ ಕ್ಷಮಿಸಿ ನನಗೆ ಆ ದಶಕದ ನೆನಪುಗಳು ಮಾಸಿಹೋಗಿವೆ" ಎಂದು ಪಚಿನೋ ಮಿರರ್.ಕೊ.ಯುಕೆ ಗೆ ತಿಳಿಸಿದ್ದಾರೆ.

"ಈಗ ಚಿಂತಿಸುತ್ತಾ ಹೋದರೆ ನನಗೆ ೮೦ ರ ದಶಕದ್ದೂ ಅಷ್ಟು ನೆನಪಿಲ್ಲ" ಎಂದು ಕೂಡ ಅವರು ತಿಳಿಸಿದ್ದಾರೆ.

೭೫ ವರ್ಷದ 'ಸೆಂಟ್ ಆಫ್ ಎ ವುಮೆನ್' ಚಿತ್ರದ ನಾಯಕ ತಾವು ೩೦ ವರ್ಷಗಳಿಂದ  ಕುಡಿತವನ್ನು ತ್ಯಜಿಸಿರುವುದಾಗಿ ಹೇಳಿದ್ದಾರೆ ಅದಕ್ಕೆ ತಮ್ಮ ರಂಗ ನಿರ್ದೇಶಕರಾದ ಚಾರ್ಲಿ ಲಾಘ್ಟನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ-ತಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳಾಗಿದ್ದಕೆ ಅವರು ಅತಿ ಹೆಚ್ಚು ಪ್ರಭಾವಶಾಲಿ ವ್ಯಕ್ತಿ ಎಂದು ಬಣ್ಣಿಸುತ್ತಾರೆ.

"ಅವರು ನನಗೆ ಹೀಗೆ ಹೇಳಿದ್ದರು, 'ಎಲ್ ನಾನು ನಿನಗೆ ಅದು ಮಾಡು ಇದು ಮಾಡಬೇಡ ಎಂದು ಹೇಳುವುದಿಲ್ಲ ಆದರೆ ನೀನು ಕುಡೀಯುತ್ತಿದ್ದೀಯ ಮತ್ತು ಅದನ್ನು ಸೇವಿಸುತ್ತೀದ್ದೀಯ ಎಂಬುದು ಅರಿವಿರಲಿ" ಎಂದಿದ್ದರು, ಒಂದು ವರ್ಷದ ನಂತರ ಇದು ನನ್ನ ಅರಿವಿಗೆ ಬರಲು ಪ್ರಾರಂಭವಾಯಿತು ಮತ್ತು ನಾನು ಕುಡಿತ ಮತ್ತು ಅದನ್ನು ಸೇವಿಸುವುದನ್ನು ತೊರೆದೆ. ಅದು ನನ್ನನು ಬದುಕುಳಿಸಿತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com