ನವೀನ್ ಕೃಷ್ಣ ಮತ್ತೊಂದು ಚಿತ್ರಕ್ಕೆ ದಯಾಳ್ ಪದ್ಮನಾಭನ್ ನಿರ್ದೇಶಕ

ಕಳೆದ ವರ್ಷ ತೆರೆಕಂಡ ಹಗ್ಗದ ಕೊನೆ ಚಿತ್ರಕ್ಕೆ ಅಪಾರ ಪ್ರಶಂಸೆ ಸಿಕ್ಕಿರುವ ಬೆನ್ನಲ್ಲೇ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ.
ನಿರ್ಮಾಪಕ ಕೆ.ಎಂ ವೀರೇಶ್- ನವೀನ್ ಕೃಷ್ಣ- ದಯಾಳ್ ಪದ್ಮನಾಭನ್
ನಿರ್ಮಾಪಕ ಕೆ.ಎಂ ವೀರೇಶ್- ನವೀನ್ ಕೃಷ್ಣ- ದಯಾಳ್ ಪದ್ಮನಾಭನ್
Updated on: 

ಹಗ್ಗದ ಕೊನೆ ಚಿತ್ರಕ್ಕೆ ಅಪಾರ ಪ್ರಶಂಸೆ ಸಿಕ್ಕಿರುವ ಬೆನ್ನಲ್ಲೇ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ.
ಹಗ್ಗದ ಕೊನೆ ಚಿತ್ರದದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ನವೀನ್ ಕೃಷ್ಣ ಅವರೊಂದಿಗೆ ಪದ್ಮನಾಭನ್ ಕೈಜೋಡಿಸಿದ್ದು, ಬ್ರಿಡ್ಜ್ (ವಾಣಿಜ್ಯ-ಕಲಾತ್ಮಕ) ಪರಿಕಲ್ಪನೆಯ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರರಂಗದ ವಿಷಯವನ್ನೇ ಆರಿಸಿಕೊಂಡಿರುವ ದಯಾಳ್ ಪದ್ಮನಾಭನ್ ಚಿತ್ರರಂಗದ ಮತ್ತೊಂದು ಮಗ್ಗುಲನ್ನು ತಮ್ಮ ಮುಂದಿನ ಚಿತ್ರದಲ್ಲಿ ತೋರಿಸಲಿದ್ದಾರೆ.
ಶೇ.80 ರಷ್ಟು ಚಿತ್ರವನ್ನು ನವೀನ್ ಕೃಷ್ಣ ಅವರ ಪಾತ್ರ ಆವರಿಸಿಕೊಂಡಿದ್ದು, ಚಿತ್ರದ ಕೊನೆ ಹಂತದಲ್ಲಿ ಸಿಹಿಕಹಿ ಗೀತಾ ನಟಿಸಿರುವ ಪಾತ್ರ ಬರಲಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರದ ಚಿತ್ರೀಕರಣ ನವೆಂಬರ್ 16 ರಿಂದ ಪ್ರಾರಂಭವಾಗಲಿದೆ.
ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿರುವ ನಟನೋರ್ವ ಏಕಾಏಕಿ ಕುಸಿಯುವ ಕಥಾವಸ್ತುವನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಒಂದೇ ನಾಣ್ಯಕ್ಕೆ ಎರಡು ಮುಖ ಇರುವಂತೆ ಒಬ್ಬ ನಟನಿಗೆ ಎರಡು ಮುಖಗಳಿರುತ್ತವೆ. ಅದನ್ನು ಈ ಚಿತ್ರದಲ್ಲಿ ಹೇಳುವುದಾಗಿ ದಯಾಳ್ ಪದ್ಮನಾಭನ್ ಹೇಳಿದ್ದಾರೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ವರೆಗೆ ನಡೆಯಲಿರುವ ಘಟನೆ 2 ವರೆ ಗಂಟೆ ಚಿತ್ರ ರೂಪದಲ್ಲಿ ಪ್ರೇಕ್ಷಕರೆದುರು ಬರಲಿದೆ. ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು ಫೆ.19 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com