ದಿವಂಗತ ಶಂಕರ್‌ ನಾಗ್‌ಗೆ ಇಂದು 61ನೇ ಹುಟ್ಟುಹಬ್ಬ

ಕನ್ನಡ ಚಿತ್ರರಂಗ ಕಂಡ ಮಹಾನ್ ಕ್ರಿಯಾಶೀಲಾ ವ್ಯಕ್ತಿ ಹಾಗೂ ಅತ್ಯದ್ಭುತ ನಟ ಕಮ್ ನಿರ್ದೇಶಕ ಶಂಕರ್ ನಾಗ್ ಅವರಿಗೆ 61ನೇ ಹುಟ್ಟ ಹಬ್ಬ...
ಶಂಕರ್ ನಾಗ್
ಶಂಕರ್ ನಾಗ್
ಕನ್ನಡ ಚಿತ್ರರಂಗ ಕಂಡ ಮಹಾನ್ ಕ್ರಿಯಾಶೀಲಾ ವ್ಯಕ್ತಿ ಹಾಗೂ ಅತ್ಯದ್ಭುತ ನಟ ಕಮ್ ನಿರ್ದೇಶಕ ಶಂಕರ್ ನಾಗ್ ಅವರಿಗೆ 61ನೇ ಹುಟ್ಟ ಹಬ್ಬ. 
೧೯೫೪ ನವೆಂಬರ್ ೯ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ ಎನ್ನುವ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಜನನ. ತಂದೆ ಸದಾನಂದ ನಾಗರಕಟ್ಟೆಯವರ ಮುದ್ದಿನ ಮಗ. ಈ ದೈತ್ಯ ಪ್ರತಿಭೆ ಇವತ್ತಿಗೂ ನಮ್ಮೊಂದಿಗಿದ್ದಾರೆ ಎನ್ನಲು ಆಟೋ ಹಿಂದೆ ಹಾಗೂ ಆಟೋ ನಿಲ್ದಾಣದಲ್ಲಿ ರಾರಾಜಿಸುವ ಶಂಕರ್ ನಾಗ್ ಫೋಟೋಗಳು ಜೀವಂತ ಸಾಕ್ಷಿಯಾಗಿವೆ.
ಮುಂಬೈನಲ್ಲಿ ಕಾಮರ್ಸ್​ ಪದವಿ ಮುಗಿಸಿದ ಶಂಕರ್ ನಾಗ್, ಸಿನಿಮಾ ಲೋಕಕ್ಕೆ ಬಂದಿದ್ದೇ ಇಂಟೆರೆಸ್ಟಿಂಗ್. ಮೊದಲಿಂದಲೂ ಒರಟಾದ ಇಮೇಜಿನ ಶಂಕರಣ್ಣರ ಚೊಚ್ಚಲ ಚಿತ್ರ ಒಂದಾನೊಂದು ಕಾಲದಲ್ಲಿ. ಈ ಚಿತ್ರದಲ್ಲಿ ಒರಟಾನಾಗಿ ಕಾಣಿಸಿಕೊಂಡು ಕನ್ನಡಿಗರ ಮನ ಗಮನ ಸೆಳೆದರು. ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ.. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿ ಪ್ರತಿ ರಂಗದಲ್ಲೂ ಕೈ ಹಾಕಿ ಸಿಹಿ ಉಂಡಿದ್ದರು. ನಟ, ನಿರ್ದೇಶಕ ಮತ್ತು ತಂತ್ರಜ್ಞನಾಗಿ ಗುರುತಿಸಿಕೊಂಡಿದ್ದರು.
ಒಂದಾನೊಂದು ಕಾಲದಲ್ಲಿ, ಮಿಂಚಿನ ಓಟ, ಆಟೋ ರಾಜ, ಗೀತಾ, ಹೊಸ ಜೀವನ, ನೋಡಿ ಸ್ವಾಮಿ ನಾವು ಇರೋದು ಹೀಗೆ, ಸಾಂಗ್ಲಿಯಾನ, ಸಿ ಬಿ ಐ ಶಂಕರ್ ಹೀಗೆ ಕನ್ನಡ ಹಾಗೂ ಮರಾಠಿ ಸೇರಿದಂತೆ ಬರೋಬ್ಬರಿ 90ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಶಂಕರ್ ನಾಗ್ ಅಭಿನಯಿಸಿದ್ದಾರೆ.
ಮಾಲ್ಗುಡಿ ಡೇಸ್ ನಿರ್ದೇಶಿಸಿ ಶಂಕರ್​​ನಾಗ್​​ ಇಡೀ ದೇಶದಲ್ಲೇ ಮನೆ ಮಾತಾಗಿ ಹೋಗಿದ್ದರು. ಸಾಮಾಜಿಕ ಕಳಕಳಿ, ಕನ್ನಡ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಅಪಾರ ಗೌರವ ಹೊಂದಿದ್ದ ಇವರು, ಸಂಕೇತ್ ಸ್ಟುಡಿಯೋ ಮೂಲಕ ಕನ್ನಡ ಚಿತ್ರರಂಗ ಬೆಂಗಳೂರಲ್ಲೇ ನೆಲೆಯೂರಲು ಪ್ರಯತ್ನಪಟ್ಟರು. ಒಟ್ಟಿನಲ್ಲಿ ಶಂಕರ್ ನಾಗ್ ನಮ್ಮನ್ನು ಭೌತಿಕವಾಗಿ ಅಗಲಿ 25 ವರ್ಷ ಆಗುತ್ತಿದೆ. ಆದರೂ ಆತ್ಮೀಯತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಸದಾ ನಮ್ಮೆಲ್ಲರ ಜೊತೆಯಿರೋದಿಕ್ಕೆ ನೂರೆಂಟು ಸಾಕ್ಷಿ.
ತಮ್ಮ ಮೊಟ್ಟ ಮೊದಲ ಚಿತ್ರಕ್ಕೆ ಸ್ವರ್ಣ ಕಮಲ ಪದಕವನ್ನು ಪಡೆದ ಶಂಕರ್, ನಾಟಕ ರಂಗದಲ್ಲೂ ವಿಭಿನ್ನ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದರು. 
ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಂಕರ್ ನಾಗ್ ಎಂದು ಸಂಭಾವನೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಏನಾದರೂ ಮಾಡುತ್ತಿರು ತಮ್ಮಾ ನೀ ಸುಮ್ಮನಿರಬ್ಯಾಡ ಎಂದು ಯುವಪೀಳಿಗೆಗೆ ಹೇಳುತ್ತಲೇ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com