ಕ್ರಿಸ್ ಗೇಲ್ ಬಾಯಲ್ಲಿ ಮೋಹನ್ ಲಾಲ್ ಡೈಲಾಗ್!

ಕ್ರಿಸ್ ಗೇಲ್ ಕನ್ನಡಿಗರಿಗೆ ತುಂಬಾ ಅಚ್ಚುಮೆಚ್ಚು. ಆರ್ ಸಿಬಿಯನ್ನು ಪ್ರತಿನಿಧಿಸುತ್ತಾರೆ. ಬೆಂಗಳೂರು ಪಿಚ್ ನಲ್ಲಿ ಸಿಕ್ಕಾಪಟ್ಟೆ ಸಿಕ್ಸರ್ ಹೊಡೀತಾರೆ- ಐ ಲವ್ ಯೂ ಎನ್ನುತ್ತಿದ್ದಾರೆ...
ಕ್ರಿಸ್ ಗೇಲ್
ಕ್ರಿಸ್ ಗೇಲ್

ಕ್ರಿಸ್ ಗೇಲ್ ಕನ್ನಡಿಗರಿಗೆ ತುಂಬಾ ಅಚ್ಚುಮೆಚ್ಚು. ಆರ್ ಸಿಬಿಯನ್ನು ಪ್ರತಿನಿಧಿಸುತ್ತಾರೆ. ಬೆಂಗಳೂರು ಪಿಚ್ ನಲ್ಲಿ ಸಿಕ್ಕಾಪಟ್ಟೆ ಸಿಕ್ಸರ್ ಹೊಡೀತಾರೆ- ಐ ಲವ್ ಯೂ ಎನ್ನುತ್ತಿದ್ದಾರೆ. ಯಾಕೆ? ಅಂತ ಕೇಳಿ. ನೀ ಪೊ ಮೊನೆ ದಿನೇಶ ಎಂಬ ಡೈಲಾಗ್ ಅನ್ನು ನೀವೂ ಕೇಳಿದ್ದೀರಲ್ವಾ? ನರಸಿಂಹಂ ಎಂಬ ಪ್ರಸಿದ್ಧ ಮಲಯಾಳಂ ಚಿತ್ರದಲ್ಲಿ ನಟ ಮೋಹನ್ ಲಾಲ್ ಹತ್ತಾರು ಸಲ ಇದನ್ನು ಹೇಳುವುದು ತಮಾಷೆಯ ದೃಶ್ಯ. ಅಂದ್ರೆ, ನೀ ಆಚೆ ಹೋಗ್ ಮಾರಾಯ ಅಂತ. ಇಲ್ಲಿ ದಿನೇಶ ಎಂಬ ಹೆಸರಿಗೆ ನೀವು ಯಾರನಾದರೂ ಕೂರಿಸಬಹುದು. ಈಗ ಈ ಪ್ರಸಿದ್ಧ ಡೈಲಾಗನ್ನು ಕ್ರಿಸ್ ಗೇಲ್ ಹೇಳಿ, ಕೇರಳದ ಜನತೆಗೆ ಇಷ್ಟವಾಗಿದ್ದಾರೆ! ಕ್ರಿಸ್ ಗೇಲ್ ನ ನೀ ಪೊ ಮೊನೆ ದಿನೇಶ ಎಂಬ ಡೈಲಾಗ್ ವಿಡಿಯೋ ಈಗ ವೈರಲ್ ಆಗಿದೆ. ಅಂದಹಾಗೆ, ಗೇಲ್ ಈಗ ಕೇರಳ ಕ್ರಿಕೆಟ್ ಲೀಗ್ ನ ಅಂಬಾಸಿಡರ್. ದುಬೈನಲ್ಲಿ ಇದರ ಪ್ರಚಾರಕ್ಕಾಗಿ 15 ಸೆಕೆಂಡ್ ಗಳ ವಿಡಿಯೋದಲ್ಲಿ ಗೇಲ್ ನಿಂದ ಈ ಡೈಲಾಗನ್ನು ಹೇಳಿಸಲಾಗಿದೆ. ಅದು ದುಬೈನ ಖಾಸಗಿ ಎಫ್ಎಂ ಸ್ಪೇಶನ್ ಒಂದರಲ್ಲಿ ಪ್ರಸಾರ ಆಗಿ, ಎಲ್ಲರ ಆಸಕ್ತಿಯನ್ನು ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com