ಹೌದು, ನನಗೆ ಏಡ್ಸ್ ಇದೆ-ನಟ ಶೀನ್

ಹಾಲಿವುಡ್ ನಟ, ಟೂ ಆ್ಯಂಡ್ ಎ ಹಾಫ್ ಮೆನ್ ಚಿತ್ರದ ಖ್ಯಾತಿಯ ಚಾರ್ಲಿ ಶೀನ್ ತಾನು ಹೆಚ್‍ಐವಿ ಸೋಂಕು ಪೀಡಿತನೆಂಬ ಸುದ್ದಿ ಬಹಿರಂಗಗೊಳಿಸುವ ಮೂಲಕ ಅಭಿಮಾನಿಬಳಗಕ್ಕೆ ಶಾಕ್ ನೀಡಿದ್ಧಾರೆ...
ನಟ ಚಾರ್ಲಿ ಶೀನ್ (ಸಂಗ್ರಹ ಚಿತ್ರ)
ನಟ ಚಾರ್ಲಿ ಶೀನ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಹಾಲಿವುಡ್ ನಟ, ಟೂ ಆ್ಯಂಡ್ ಎ ಹಾಫ್ ಮೆನ್ ಚಿತ್ರದ ಖ್ಯಾತಿಯ ಚಾರ್ಲಿ ಶೀನ್ ತಾನು ಹೆಚ್‍ಐವಿ ಸೋಂಕು ಪೀಡಿತನೆಂಬ ಸುದ್ದಿ ಬಹಿರಂಗಗೊಳಿಸುವ ಮೂಲಕ ಅಭಿಮಾನಿಬಳಗಕ್ಕೆ ಶಾಕ್ ನೀಡಿದ್ಧಾರೆ.

ಟುಡೇ ಟಿವಿ ಷೋದಲ್ಲಿ ಈ ವಿಷಯ ಒಪ್ಪಿಕೊಂಡ ಅವರು 4 ವರ್ಷಗಳಿಂದ ತಾವು ಹೆಚ್‍ಐವಿ ಪೀಡಿತರಿದ್ದು, ಈ ಸುದ್ದಿ ಗೊತ್ತಾದಾಗಿನಿಂದ ಪ್ರಾಮಾಣಿಕವಾಗಿ ಬದುಕುತ್ತಿದ್ದು, ಕಾಂಡೋಮ್  ಇಲ್ಲದೆಯೇ ಲೈಂಗಿಕ ಸಂಪರ್ಕ ನಡೆಸುತ್ತಿಲ್ಲ ಎಂದು ಹೇಳಿಕೊಂಡಿದ್ಧಾರೆ. ವೈಯಕ್ತಿಕವಾಗಿ ಇದನ್ನು ಮುಚ್ಚಿಟ್ಟಿಲ್ಲ ಎಂದೂ ಸ್ಪಷ್ಟಪಡಿಸಿದ್ಧಾರೆ. ಇಬ್ಬರೊಂದಿಗೆ ಅಸುರಕ್ಷಿತ ಸಂಪರ್ಕ ಹೊಂದಿದ್ದು  ಅವರ ಆರೋಗ್ಯದ ಜವಾಬ್ದಾರಿ ತಾನೇ ಹೊತ್ತಿರುವುದಾಗಿ ಹೇಳಿದ್ಧಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com