

ಪುಟಾಣಿ ಪಂಟ್ರು 2 ವಿನ ಫಿನಾಲೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ ಮಕ್ಕಳೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ ಸಂಜೆ 6 ಗಂಟೆಗೆ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಅಂತಿಮ ಪ್ರದರ್ಶನದ ತೀರ್ಪುಗಾರರಾಗಿ ನಟಿ ರಕ್ಷಿತಾ, ಎಂ.ಸುಂದರ್ ಭಾಗವಹಿಸಲಿದ್ದಾರೆ.
ಪುಟಾಣಿ ಪಂಟ್ರು ಸೀಸನ್ 2 ನಲ್ಲಿ ಭಾಗವಹಿಸಿದ್ದ 15 ಮಕ್ಕಳಲ್ಲಿ ಅಂತಿಮ ಸುತ್ತಿಗೆ 5 ಮಕ್ಕಳು ಆಯ್ಕೆಯಾಗಿದ್ದು, ಅವರಲ್ಲಿ ಗೆಲ್ಲುವವರು ಯಾರು ಎಂದು ಭಾನುವಾರ ಗೊತ್ತಾಗಲಿದೆ. ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಮಕ್ಕಳು ವರ್ಷಿಣಿ, ಸಾಕ್ಷಿ, ರಾಗಿಣಿ, ತೌಶೀರ್ ಮತ್ತು ಸದ್ವೀನ್. ಈ ಶೋವನ್ನು ನಿರಂಜನ್ ದೇಶಪಾಂಡೆ ನಡೆಸಿಕೊಡುತ್ತಿದ್ದಾರೆ.