
ವಿಶ್ವದ ಮೂಲೆ ಮೂಲೆಗಳಿಂದ ಪ್ರಶಂಸೆಯ ಸುರಿಮಳೆ ಪಡೆದ ಬಾಹುಬಲಿ ಸಿನಿಮಾದ ಹೀರೋ ಪ್ರಭಾಸ್ ಈಗ ಸಖತ್ ಬ್ಯೂಸಿಯಾಗಿದ್ದಾರೆ. ಈ ನಡುವೆ ಬಾಹುಬಲಿ ಪಾರ್ಟ್ 2 ಮಾಡಲು ರಾಜಮೌಳಿ ತಯಾರಿ ಮಾಡುತ್ತಿದ್ದಾರೆ. ಹೀಗಿರುವಾಗಲೇ ಪ್ರಭಾಸ್ ಸಂತೋಷವನ್ನು ಇಮ್ಮಡಿಗೊಳಿಸುವ ಸುದ್ದಿಯೊಂದು ಹರಿದು ಬಂದಿದೆ.
ಬಾಲಿವುಡ್ ನಲ್ಲಿ ಧೂಮ್ -4 ಸಿನಿಮಾಗಾಗಿ ತಯಾರಿ ನಡೆಯುತ್ತಿರೋದು ಗೊತ್ತೇ ಇದೆ. ಹೀಗಿರುವಾಗಲೇ ಸಿನಿಮಾಕ್ಕೆ ವಿಲನ್ ಆಯ್ಕೆಗೂ ಕಸರತ್ತು ನಡೆಯುತ್ತಿದೆ. ಆದ್ರೆ ಸಿನಿಮಾ ತಂಡದಿಂದ ಸದ್ಯ ಬಂದಿರೋ ಪ್ರಕಾರ ಸಿನಿಮಾದ ವಿಲನ್ ಪಾತ್ರಕ್ಕಾಗಿ ಒಬ್ಬರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆಯಂತೆ. ಅದು ಬೇರಾರು ಅಲ್ಲ ಬಾಹುಬಲಿ ಸಿನಿಮಾದ ಹೀರೋ ಪ್ರಭಾಸ್.
ಈಗಾಗಲೇ ಯಶ್ ರಾಜ್ ಫಿಲ್ಮ್ ಬ್ಯಾನರ್ ಸಿನಿಮಾದಲ್ಲಿ ಅಭಿನಯಿಸೋದಕ್ಕಾಗಿ ಪ್ರಭಾಸ್ ಅವರ ಜೊತೆ ಮಾತುಕತೆ ನಡೆಸಿದೆಯಂತೆ. ಸಿನಿಮಾದಲ್ಲಿ ವಿಲನ್ ಆಗಿ ಕಾಣಸಿಕೊಳ್ಳಲು ಕೇಳಿಕೊಂಡಿದೆಯಂತೆ. ಆದ್ರೆ ಇದುವರೆಗೂ ಪ್ರಭಾಸ್ ಮಾತ್ರ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ.ಆದ್ರೆ ಬಾಹುಬಲಿ ಸಿನಿಮಾದಿಂದಾಗಿ ಬಾಲಿವುಡ್ ನಲ್ಲೂ ಅಭಿನಯಿಸೋ ಯೋಗ ಕೂಡಿ ಬಂದಿದೆ ಪ್ರಭಾಸ್ ಗೆ.
Advertisement