ಆಸ್ಕರ್ ಕಟಕಟೆಯಲ್ಲಿ ಮರಾಠಿ ಕೋರ್ಟ್

ಬರುವ ವರ್ಷ ನಡೆಯುವ 88ನೇ ಆಸ್ಕರ್ ಪ್ರಶಸ್ತಿಗಾಗಿ ಅತ್ಯುತ್ತಮ ವಿದೇಶಿ ಚಿತ್ರಗಳ ವಿಭಾಗದಲ್ಲಿ ಭಾರತದಿಂದ ಮರಾಠಿ ಭಾಷೆಯ ಕೋರ್ಟ್ ಚಿತ್ರ ಸ್ಪರ್ಧಿಸಲಿದೆ...
ಕೋರ್ಟ್ ಚಿತ್ರದ ದೃಶ್ಯ (ಸಂಗ್ರಹ ಚಿತ್ರ)
ಕೋರ್ಟ್ ಚಿತ್ರದ ದೃಶ್ಯ (ಸಂಗ್ರಹ ಚಿತ್ರ)

ಮುಂಬೈ: ಬರುವ ವರ್ಷ ನಡೆಯುವ 88ನೇ ಆಸ್ಕರ್ ಪ್ರಶಸ್ತಿಗಾಗಿ ಅತ್ಯುತ್ತಮ ವಿದೇಶಿ ಚಿತ್ರಗಳ ವಿಭಾಗದಲ್ಲಿ ಭಾರತದಿಂದ ಮರಾಠಿ ಭಾಷೆಯ ಕೋರ್ಟ್ ಚಿತ್ರ ಸ್ಪರ್ಧಿಸಲಿದೆ.

ಚೈತ್ಯನ್ಯ ತಮ್ಹಾಣೆ ನಿರ್ದೇಶನದ ಈ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ವಿಡಂಬನೆಯ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿತ್ತು.  ವಿವಿಧ ಭಾಷೆಯ 30 ದೊಡ್ಡ ಬಜೆಟ್ ನ ಚಿತ್ರಗಳು ಈ ಬಾರಿ ರೇಸ್‍ನಲ್ಲಿದ್ದವು. ಅವೆಲ್ಲವನ್ನೂ ಬದಿಗೊತ್ತಿ ಈ ಕಡಿಮೆ ವೆಚ್ಚದ ಚಿತ್ರ ಕೇವಲ ತನ್ನ ಕಥಾಹಂದರ ಮತ್ತು ನಿರೂಪಣೆಯಿಂದಲೇ ಆಯ್ಕೆ ಯಾಗಿದೆ ಎಂದು ಎಫ್ ಎಫ್ ಐನ ಕಾರ್ಯದರ್ಶಿ ಸುಪ್ರಾನ್ ಸೇನ್ ತಿಳಿಸಿದ್ದಾರೆ.

ಈಗಾಗಲೇ ಈ ಚಿತ್ರ 17 ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿರುವುದಲ್ಲದೆ ವೆನಿಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರೀಮಿಯರ್ ಪ್ರದರ್ಶನ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com