

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಯಶಸ್ಸಿನ ಮೂಲಕ ಖ್ಯಾತಿ ಪಡೆದಿರುವ ರಕ್ಷಿತ್ ಶೆಟ್ಟಿಯವರಿಗೆ ಸಿಂಪಲ್ ಆಗಿರುವ ಕೆಲಸಗಳೆಂದರೆ ಇಷ್ಟವಿಲ್ಲಂತೆ. ನಿರ್ದೇಶನದಲ್ಲಿ ಪದವಿ ಪಡೆದಿರುವ ರಕ್ಷಿತ್ ಶೆಟ್ಟಿಯವರು ಉಳಿದವರು ಕಂಡಂತೆ ಚಿತ್ರದ ನಿರ್ದೇಶನದ ಮೂಲಕ ಜನರ ಗಮನ ಸೆಳೆದಿದ್ದರು.
ಇದೀಗ ಕಾಂಟೆಸಾ ಏರಿ ಕಾಲೇಜಿಗೆ ಹೋಗಲು ಸಿದ್ಧವಾಗಿರುವ ರಕ್ಷಿತ್ ಅವರು ಕಿರಿಕ್ ಪಾರ್ಟಿ ಮೂಲಕ ಮತ್ತೆ ಜನರ ಮುಂದೆ ಬರಲಿದ್ದಾರೆ. ಪರಂವಾ ನಿರ್ಮಾಣ ಸಂಸ್ಥೆಯಿಂದ ಕಿರಿಕ್ ಪಾರ್ಟಿ ಚಿತ್ರ ಹೊರಬರುತ್ತಿದ್ದು, ಈಗಾಗಲೇ ಚಿತ್ರಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವ ಚಿತ್ರದ ತಂಡ ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭ ಮಾಡಲಿದೆ.
ಚಿತ್ರದ ಕುರಿತಂತೆ ಮಾತನಾಡಿರುವ ರಕ್ಷಿತ್ ಅವರು, ಚಿತ್ರದಲ್ಲಿ ದ್ವಿಮುಖತೆಯ ವಿಭಿನ್ನತೆ ರೀತಿಯಲ್ಲಿ ನನ್ನನ್ನು ತೋರಿಸಲಾಗುತ್ತಿದೆ. ಮೊದಲ ಮುಖ ಕಾಲೇಜು ಯುವಕನಾಗಿ ತೋರಿಸಲಾಗುತ್ತಿದೆ. ಚಿತ್ರೀಕರಣ ನಾಳೆಯಿಂದ ಆರಂಭವಾಗುತ್ತಿದೆ. ಪಾತ್ರದಲ್ಲಿ ನಾನು ಯುವಕನಾಗಿ ಕಾಣಬೇಕಿರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಡಯೆಟ್ ಮಾಡಲಾಗುತ್ತಿದೆ. ವಾರದ ಏಳು ದಿನಗಳೂ ವರ್ಕ್ ಔಟ್ ಮಾಡುತ್ತಿದ್ದೇನೆ. ಹೊಸ ಲುಕ್ ಗಾಗಿ ಕೂದಲಿಗೂ ಹೊಸ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ ಹೇಳಿದ್ದಾರೆ.
ಪ್ರಸ್ತುತ ಚಿತ್ರದ ಚಿತ್ರೀಕರಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಲು ಹಾಸನಕ್ಕೆ ಭೇಟಿ ನೀಡಿದೆ. ಇದರಂತೆ ಕಥೆ ಹಿನ್ನೆಲೆಗಾಗಿ ಶೂಟಿಂಗ್ ಗಾಗಿ ಕಾಲೇಜೊಂದನ್ನು ಹುಡುಕುತ್ತಿದೆ. ಚಿತ್ರವನ್ನು ಪ್ರಸ್ತುತ ದೃಷ್ಟಿಕೋನದ ಮೂಲಕ ಮಾಡಲಾಗುತ್ತಿದೆ. ಎಲ್ಲಾ ರೀತಿಯ ಜನರನ್ನು ಆಕರ್ಷಿಸುವ ಸಲುವಾಗಿ ಚಿತ್ರವನ್ನು ಮಾಡಲಾಗಿದೆ. ಇನ್ನು ಚಿತ್ರದ ಬಹುತೇಕ ಚಿತ್ರೀಕರಣವನ್ನು ಮಲೆನಾಡಿನಲ್ಲಿ ಮಾಡಲಾಗುತ್ತಿದ್ದು, 30 ದಿನಗಳ ಕಾಲ ಅಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಕಿರಿಕ್ ಪಾರ್ಟಿ ಚಿತ್ರದಲ್ಲಿ ಇಬ್ಬರು ನಾಯಕರಿಯರಿದ್ದು, ರಶ್ಮಿಕ ಮಂಡಣ್ಣ ಮತ್ತು ಸಂಯುಕ್ತ ಹೆಗ್ಡೆಯವರು ನಾಯಕರಾಗಿದ್ದಾರೆ ಮತ್ತು 20 ಹೊಸ ಮುಖಗಳನ್ನು ಚಿತ್ರದಲ್ಲಿ ಪರಿಚಯಿಸಲಾಗುತ್ತಿದೆ. ಚಿತ್ರವನ್ನು ರಿಶಬ್ ಶೆಟ್ಟಿಯವರೇ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಬಳಸಲಾಗುತ್ತಿರುವ ಕಾಂಟೆಸ್ಸಾ ಕಾರು ಕೂಡ ಅವರದ್ದೇ. ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಕಾರನ್ನು ಚಿತ್ರಕ್ಕೆ ಬೇಕಾದ ರೀತಿಯಲ್ಲಿ ತಯಾರು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.