ಕೇಳಲು ಇಂಪಾಗಿವೆ ಮುಂಗಾರು ಮಳೆ-2 ಚಿತ್ರದ ಹಾಡುಗಳು

2006ರಲ್ಲಿ ತೆರೆಕಂಡಿದ್ದ ಮುಂಗಾರು ಮಳೆ ಚಿತ್ರ ಭರ್ಜರಿ ಹಿಟ್ಟಾಗಿತ್ತು, ಅಲ್ಲದೆ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ...
ಮುಂಗಾರು ಮಳೆ-2
ಮುಂಗಾರು ಮಳೆ-2

2006ರಲ್ಲಿ ತೆರೆಕಂಡಿದ್ದ ಮುಂಗಾರು ಮಳೆ ಚಿತ್ರ ಭರ್ಜರಿ ಹಿಟ್ಟಾಗಿತ್ತು, ಅಲ್ಲದೆ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಅದೃಷ್ಟವನ್ನೇ ಬದಲಿಸಿತ್ತು. ಇದೀಗ ಮುಂಗಾರು ಮಳೆ-2 ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಕೇಳಲು ಬಹು ಇಂಪಾಗಿವೆ.

ಮುಂಗಾರು ಮಳೆ ಚಿತ್ರದಲ್ಲಿ ಮೊದಲು ಹೈಲೈಟ್ ಆಗಿದ್ದು ಸುಂದರ ಹಾಡುಗಳು ಮತ್ತು ಅದ್ಬುತ ಲೋಕೇಶ್ ಗಳು. ಇದೀಗ ಮುಂಗಾರು ಮಳೆ ಚಿತ್ರದಲ್ಲೂ ಹಾಡುಗಳು ಇಂಪಾಗಿದ್ದು, ಟ್ರೈಲರ್ ನೋಡಿದಾಗ ಸುಂದರ ತಾಣಗಳಲ್ಲಿ ಚಿತ್ರವನ್ನು ಸೆರೆ ಹಿಡಿದಿರುವುದು ಕಾಣಿಸುತ್ತದೆ.

ಮುಂಗಾರು ಮಳೆ ಚಿತ್ರಕ್ಕೆ ಮನೋಮೂರ್ತಿ ಅವರು ಅದ್ಭುತ ಸಂಗೀತ ಸಂಯೋಜಿಸಿದ್ದರು, ಇದೀಗ ಮುಂಗಾರು ಮಳೆ-2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್ ಆಗಲಿವೆ.

ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಮುಂಗಾರು ಮಳೆ-2 ಚಿತ್ರ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರವಿಚಂದ್ರನ್, ನಿಶಾ ಶೆಟ್ಟಿ ಸೇರಿದಂತೆ ಬಹುತಾರಾಗಣವನ್ನು ಒಳಗೊಂಡಿದೆ.

ಝೇಂಕಾರ್ ಮ್ಯೂಜಿಕ್ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com