ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್ ಆಡಿಯೋ ಮಾಲೀಕ ಹಾಗೂ ಚಿತ್ರ ನಿರ್ಮಾಪಕರಾದ ಮೋಹನ್ ಛಾಬ್ರಿಯಾ(52) ಅವರು ಶನಿವಾರ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಮೋಹನ್ ಅವರು ಇತ್ತೀಚಿಗಷ್ಟೇ ಯಕೃತ್ತು ಕಸಿ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಗೂ ಮುನ್ನವೇ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎರಡು ದಶಕಗಳ ಹಿಂದೆ ಆನಂದ್ ಆಡಿಯೋ ಸಂಸ್ಥೆ ಪ್ರಾರಂಭಿಸಲಾಗಿತ್ತು. ಕನ್ನಡ ಸಿನಿಮಾ ಹಾಡುಗಳ ಮುದ್ರಣ ಮತ್ತು ಹಂಚಿಕೆಯಲ್ಲಿ ಹೆಸರು ಮಾಡಿದ್ದ ಮೋಹನ್ ಅವರು ಶರಣ್ ಅಭಿನಯದ ‘ವಿಕ್ಟರಿ’ ಸೇರಿದಂತೆ ಕೆಲವು ಸಿನಿಮಾಗಳ ನಿರ್ಮಾಣವನ್ನೂ ಮಾಡಿದ್ದರು.