ನಟ ಮಯೂರ್ ಪಟೇಲ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ

ಚೆಕ್ ಬೌನ್ಸ್ ಪ್ರಕರಣ ಸಂಬಂಧ ನಟ ಮಯೂರ್ ಪಟೇಲ್ ವಿರುದ್ಧ ಸಿಟಿ ಸಿವಿಲ್ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ...
ಮಯೂರ್ ಪಟೇಲ್
ಮಯೂರ್ ಪಟೇಲ್
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಂಬಂಧ ನಟ ಮಯೂರ್ ಪಟೇಲ್ ವಿರುದ್ಧ ಸಿಟಿ ಸಿವಿಲ್ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ದೊಡ್ಡಬಳ್ಳಾಪುರದ ಉದ್ಯಮಿ ಸೆಲ್ವಕುಮಾರ್ ಎಂಬುವವರಿಂದ 2014ರಲ್ಲಿ ನಟ ಮಯೂರ್ ಪಟೇಲ್ ರು.5ಲಕ್ಷ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡುವ ಸಲುವಾಗಿ ಮಯೂರ್ ಪಟೇಲ್, ಸೆಲ್ವಕುಮಾರ್ ಗೆ ಇತ್ತೀಚೆಗೆ ರು.5 ಲಕ್ಷ ಚೆಕ್ ನೀಡಿದ್ದರು.
ಆದರೆ, ಆ ಚೆಕ್ ಬ್ಯಾಂಕ್ ನಲ್ಲಿ ಬೌನ್ಸ್ ಆಗಿತ್ತು. ಈ ಸಂಬಂಧ ಸೆಲ್ವಕುಮಾರ್ ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದೂರಿನ ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್ ಮಯೂರ್ ಪಟೇಲ್ ಗೆ ಕೋರ್ಟ್ ಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. ಆದರೆ, ಕೋರ್ಟ್ ಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಕೋರ್ಟ್ ವಾರೆಂಟ್ ಹಿಡಿದು ಪೊಲೀಸರು ಬುಧವಾರ ಜೋಗುಪಾಳ್ಯದ ಮಯೂರ್ ಪಟೇಲ್ ನಿವಾಸಕ್ಕೆ ತೆರಳಿದ್ದರು. ಗುರುವಾರ ಖುದ್ದು ಕೋರ್ಟ್ ಗೆ ಹಾಜರಾಗುವುದಾಗಿ ತಿಳಿಸಿದ್ದರಿಂದ ಪೊಲೀಸರು ಹಿಂದಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com