ಸೆಂಚುರಿ ಹೊಡೆದ ಮಜಾ ಟಾಕೀಸ್

ತಮ್ಮ ಸ್ವಾಭಾವಿಕ ಕಾಮಿಡಿ ಮೂಲಕವೇ ಕನ್ನಡಿಗರ ಮನ ಗೆದ್ದಿದ್ದ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಗೆ ಸೆಂಚುರಿ ಹೊಡೆದಿದ್ದಿದ್ದು, ಭರ್ಜರಿಯಾಗಿ 100 ಎಪಿಸೋಡ್ ಗಳನ್ನು ಪೂರೈಸಿದೆ...
ಸೆಂಚುರಿ ಹೊಡೆದ ಮಜಾ ಟಾಕೀಸ್
ಸೆಂಚುರಿ ಹೊಡೆದ ಮಜಾ ಟಾಕೀಸ್

ತಮ್ಮ ಸ್ವಾಭಾವಿಕ ಕಾಮಿಡಿ ಮೂಲಕವೇ ಕನ್ನಡಿಗರ ಮನ ಗೆದ್ದಿದ್ದ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಗೆ ಸೆಂಚುರಿ ಹೊಡೆದಿದ್ದಿದ್ದು, ಭರ್ಜರಿಯಾಗಿ 100 ಎಪಿಸೋಡ್ ಗಳನ್ನು ಪೂರೈಸಿದೆ.

ಸೆಂಚುರಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಪಾಲ್ಗೊಂಡಿದ್ದು, ಇದೇ ಫೆ.7 ರಂದು ಕಾರ್ಯಕ್ರಮದ 100 ಸಂಚಿಕೆ ಪ್ರಸಾರವಾಗಲಿದೆ.

ಕಾರ್ಯಕ್ರಮದ ಯಶಸ್ಸಿನ ಕುರಿತಂತೆ ಮಾತನಾಡಿರುವ ಸೃಜನ್ ಲೋಕೇಶ್ ಅವರು, ಪ್ರತಿ ವಾರ ಜನರನ್ನು ನಗಿಸುವುದು ಸುಲಭದ ಕೆಲಸವಲ್ಲ. ಆದರೂ ಅದನ್ನು ನಾವು ಮಾಡಿದ್ದೇವೆ. ಇದರಲ್ಲಿ ಯಶಸ್ಸಿ ಕಂಡಿರುವುದು ನಿಜಕ್ಕೂ ತುಂಬಾ ಸಂತೋಷ ತಂದಿದೆ. ಇದೊಂದು ಚಿಕ್ಕ ಯಶಸ್ಸಷ್ಟೇ. ಇನ್ನೂ ದೊಡ್ಡ ಯಶಸ್ಸು ಮುಂದಿದೆ. 100 ಎಪಿಸೋಡ್ ಗಳನ್ನು ಮಾಡುವುದು ನನ್ನ ಆಲೋಚನೆಯಲ್ಲ. ಇದಕ್ಕಿಂತಲೂ ಮುಂದೆ ಸಾಕಷ್ಟು ಸಂಚಿಕೆಗಳನ್ನು ಮಾಡಬೇಕು ಎಂದು ಹೇಳಿದ್ದಾರೆ.

ಎಲ್ಲದರಂತೆ ನಮಗೂ ಸಾಕಷ್ಟು ಏಳು-ಬೀಳುಗಳ ಘಟನೆಗಳು, ಸನ್ನಿವೇಶಗಳು ಎದುರಾಗಿದೆ. ಆದರೂ ಅದೆಲ್ಲದರ ಮಧ್ಯೆಯೂ ಯಶಸ್ಸು ಕಾಣುತ್ತಿದ್ದೇವೆ. ರಿಯಾಲಿಟಿಗಳ ಮಧ್ಯೆ ಸಾಕಷ್ಟು ಪೈಪೋಟಿಗಳಿವೆ. ಆದರೂ ನಾವು ಇಂದಿನವರೆಗೂ ಉತ್ತಮ ಟಿಆರ್ ಪಿಯನ್ನು ಹೊಂದಿದ್ದೇವೆ. ನನ್ನ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಮಜಾ ಟಾಕೀಸ್ ಸಾಕಷ್ಟು ಸಹಾಯ ಮಾಡಿದೆ.

ನಾನು ಇಷ್ಟೊಂದು ಹೇಗೆ ಮಾತಾನಾಡುತ್ತೇನೆ ಎಂದು ಸಾಕಷ್ಟು ಜನರು ನನ್ನನ್ನು ಪ್ರಶ್ನಿಸುತ್ತಾರೆ. ಆದರೆ, ನನ್ನ ಪ್ಲಸ್ ಪಾಯಿಂಟ್ ಅದೇ ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಯಾವುದಕ್ಕೂ ತಯಾರಾಗಿ ಬಂದಿರುವುದಿಲ್ಲ. ಸಹಜವಾಗಿಯೇ ಮಾತನಾಡುತ್ತೇನೆ. ನನ್ನ ಉತ್ತಮ ಕ್ರೀಡೆಯಾಗಿರುವ ಕ್ರಿಕೆಟ್ ಹೋಲಿಕೆ ಮಾಡಿಕೊಳ್ಳಲು ಇಚ್ಛಿಸುತ್ತೇನೆ.

ನಾನು ಕೂಡ ನನ್ನ ಜೀವನದಲ್ಲಿ ಒಬ್ಬ ಕ್ರಿಕೆಟಿಗ. ಪ್ರತಿಯೊಂದನ್ನು ನಾನು ಚೆಂಡಿನಂತೆ ನೋಡುತ್ತೇನೇ. ಒಂದು ಕೆಟ್ಟ ಚೆಂಡು ಸಾಕು ನಮ್ಮ ವಿಕೆಟ್ ತೆಗೆಯಲು. ಆದರೆ ನಾನು 100 ಬಾಲುಗಳನ್ನು ಎದುರಿಸಿದ್ದೇನೆ. ನನ್ನ ಈ ಯಶಸ್ಸಿಗೆ, ಗೆಲವಿಗೆ ನನ್ನ ತಂಡದ ಪರಿಶ್ರಮವೇ ಕಾರಣ. ನನ್ನ ಯಶಸ್ಸನ್ನು ಅವರಿಗೆ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಮಜಾ ಟಾಕೀಸ್ ಕಾರ್ಯಕ್ರಮದ 100 ಸಂಚಿಕೆಯ ನಡೆಯುವಾಗ ಕೆಲವೊಂದು ಭಾವುಕರಾಗಿರುವ ಸನ್ನವೇಶಗಳು ನಡೆಯಿತು.. ಕಾರ್ಯಕ್ರಮದ ತಯಾರಿ ಕುರಿತಂತೆ ಮಾಡನಾಡುತ್ತಿದ್ದಾಗ ತನ್ನ ತಂದೆಯ ಬಗ್ಗೆ ಚರ್ಚೆಯಾಯಿತು. ಆ ವೇಳೆ ನನ್ನ ತಂದೆ ಕ್ಷಮೆಕೇಳಬೇಕೆನಿಸಿತು. ನನ್ನ ತಂದೆ ನನ್ನ ವೈಫಲ್ಯಗಳನ್ನು ನೋಡಿದ್ದರು. ಆದರೆ, ನನ್ನ ಯಶಸ್ಸನ್ನು ನೋಡಿರಲಿಲ್ಲ. ಅವರ ಆಶೀರ್ವಾದ ನನ್ನ ಮೇಲಿದೆ. ಇಂದು ನನ್ನ ಯಶಸ್ಸನ್ನು ನೋಡಲು ಅವರಿರಬೇಕೆಂದು ಅನಿಸುತ್ತದೆ.

ನನಗೆ ಕೋಡಂಗಿ ರೀತಿಯ ಅಥವಾ ಒಬ್ಬರನ್ನು ನಿಂದಿಸುವ ಅಣುಕಿಸುವ ಹಾಸ್ಯಗಳು ಇಷ್ಟವಾಗುವುದಿಲ್ಲ. ನನಗೆ ಸ್ವಾಭಾವಿಕ ಹಾಸ್ಯಗಳನ್ನು ಮಾಡಿ ಮನರಂಜೆ ನೀಡುವುದು ಇಷ್ಟವಾಗುತ್ತದೆ. ಇಂದು ಮಜಾ ಟಾಕೀಸ್ ನ್ನು ಚಿಕ್ಕ ಮಕ್ಕಳು ಕೂಡ ಇಷ್ಟ ಪಡುತ್ತಾರೆ. ಇದಕ್ಕೆ ಕಾರಣ ಸಹಜ ಹಾಗೂ ಸ್ವಾಭಾವಿಕ ಮನರಂಜನಯೇ ಕಾರಣ. ಇದನ್ನು ಹೀಗೆಯೇ ಕಾಪಾಡಿಕೊಳ್ಳಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com