ಅಯ್ಯಪ್ಪ ಬಗೆಗಿನ ನನ್ನ ಭಾವನೆ ಪ್ರಾಮಾಣಿಕವಾಗಿತ್ತು: ಪೂಜಾ ಗಾಂಧಿ

ಕಿರುತೆರೆಯೊಂದರ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಮನೆಯಲ್ಲಿ ೯೮ ದಿನಗಳವರೆಗೆ ಇದ್ದ ನಟಿ ಪೂಜಾ ಗಾಂಧಿ ಮತ್ತೆ ತಮ್ಮ ನೆಚ್ಚಿನ ಕಾರ್ಯಕ್ಕೆ ಹಿಂದಿರುಗಿದ್ದಾರೆ.
ನಟಿ ಪೂಜಾ ಗಾಂಧಿ
ನಟಿ ಪೂಜಾ ಗಾಂಧಿ

ಬೆಂಗಳೂರು: ಕಿರುತೆರೆಯೊಂದರ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಮನೆಯಲ್ಲಿ ೯೮ ದಿನಗಳವರೆಗೆ ಇದ್ದ ನಟಿ ಪೂಜಾ ಗಾಂಧಿ ಮತ್ತೆ ತಮ್ಮ ನೆಚ್ಚಿನ ಕಾರ್ಯಕ್ಕೆ ಹಿಂದಿರುಗಿದ್ದಾರೆ. ಈಗ ತಾವು ನಟಿಸುವ ಸಿನೆಮಾಗಳ ಆಯ್ಕೆಯ ಬಗ್ಗೆ ಹೆಚ್ಚು ಗಂಭೀರವಾಗಿದ್ದಾರಂತೆ.

ಶ್ರೀನಿವಾಸ ರಾಜು ಅವರ ನಿರ್ದೇಶನದ 'ದಂಡುಪಾಳ್ಯ-೨'ರ ಆಯ್ಕೆ ಸರಿಯಾಗಿದೆಯೇ ಎಂಬ ಪ್ರಶ್ನೆಗೆ "ಸರಿ ತಪ್ಪು ಎಂಬುದು ಇನ್ನೇನು ಉಳಿದಿಲ್ಲ, ಎಲ್ಲವೂ ಅವರ ದೃಷ್ಟಿಕೋನಕ್ಕೆ ತಕ್ಕಂತಿರುತ್ತದೆ. ನನಗೆ ದಂಡುಪಾಳ್ಯ ಸಿನೆಮಾ ಸರಣಿ ಅತಿ ನೆಚ್ಚಿನ ಆಯ್ಕೆ. ಮುಂದಿನ ಭಾಗಗಳಲ್ಲಿ ನನ್ನ ಪಾತ್ರ ಜೀವನಕ್ಕಿಂತಲೂ ದೊಡ್ಡದಾಗಿರುತ್ತದೆ. ನನ್ನ ಪ್ರದರ್ಶನಕ್ಕೆ ವಿಶಿಷ್ಟತೆ ತಂದುಕೊಟ್ಟ ಸಿನೆಮಾ ಇದು" ಎನ್ನುತ್ತಾರೆ ಪೂಜಾ.

ಅಲ್ಲದೆ ಕಳಸಾ ಬಂಢೂರಿ ಬಗೆಗಿನ ಸಾಕ್ಷ್ಯಚಿತ್ರದ ನಿರ್ಮಾಣ ಚಟುವಟಿಕೆಗಳಲ್ಲೂ ನಿರತರಾಗಿರುವ ಪೂಜಾ ಗಾಂಧಿ, ಬಿಗ್ ಬಾಸ್ ಮುಂಚಿತವಾಗಿ ಒಪ್ಪಿಕೊಂಡಿದ್ದ ಕೆಲವು ಸಿನೆಮಾಗಳು ಮುಗಿಯುವುದಕ್ಕೂ ಕಾಯುತ್ತಿದ್ದಾರೆ. "ಲಕ್ಕಿ ಶಂಕರ್ ನಿರ್ದೇಶನದ 'ಜಿಲೇಬಿ'ಯಲ್ಲಿ ಒಂದು ಹಾಡಷ್ಟೇ ಉಳಿದಿದೆ. ನಾನೇ ನಿರ್ಮಿಸುತ್ತಿರುವ ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ 'ರಾವಣಿ' ಸಂಪೂರ್ಣಗೊಳ್ಳಬೇಕಿದೆ" ಎಂದು ವಿವರಿಸುತ್ತಾರೆ ಪೂಜಾ.

ಬಿಗ್ ಬಾಸ್ ನಿಂದ ನನ್ನ ಜೀವನವನ್ನು ಸರಿಯಾದ ರೀತಿಯಲ್ಲಿ ವಿಂಗಡನೆ ಮಾಡಿ ಸರಿದೂಗಿಸಿಕೊಳ್ಳಲು ಸಹಕಾರಿಯಾಯಿತು ಎನ್ನುವ ಪೂಜಾ, ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿ, ಮತ್ತು ಪೂಜಾ ಅವರಿಗೆ ಹತ್ತಿರವಾಗಿದ್ದ ಕ್ರಿಕೆಟರ್ ಅಯ್ಯಪ್ಪ ಬಗೆಗಿನ ಪ್ರಶ್ನೆಗೆ "ಅದು ರಿಯಾಲಿಟಿ ಕಾರ್ಯಕ್ರಮ. ನಾನು ಅಲ್ಲಿ ನೈಜವಾಗಿದ್ದೆ. ಅಯ್ಯಪ್ಪ ಬಗಿಗಿನ ನನ್ನ ಭಾವನೆಗಳು ನಕಲಿಯಾಗಿರಲಿಲ್ಲ. ಅವುಗಳು ಕಾರ್ಯಕ್ರಮ ಗೆಲ್ಲಲು ಮಾಡಿದ ನಾಟಕವಲ್ಲ. ನಾನು ಪ್ರಾಮಾಣಿಕವಾಗಿದ್ದೆ" ಎಂದು ವಿವರಿಸುವ ಪೂಜಾ ಅಯ್ಯಪ್ಪನವರೊಂದಿಗಿನ ಗೆಳೆತನ ಮುಂದುವರಿಸುವಿರೇ ಎಂಬ ಪ್ರಶ್ನೆಗೆ "ಸದ್ಯಕ್ಕೆ ನನ್ನ ಕೆಲಸದಲ್ಲಿ ಬ್ಯುಸಿ ಇದ್ದೇನೆ" ಎಂದು ಪ್ರಶ್ನೆಯನ್ನು ತಳ್ಳಿಹಾಕುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com