ಬಾಲಿವುಡ್‌ಗೆ ಹಾರಿದ ನಟಿ ಮೈತ್ರೇಯಿ ಗೌಡ

ಸ್ಯಾಂಡಲ್ ವುಡ್ ನಟಿ ಮೈತ್ರೇಯಿ ಗೌಡ ಅವರು ಹಿಂದಿಯಲ್ಲಿ ತಯಾರಾಗುತ್ತಿರುವ ಹಾರರ್ ಶ್ರಾಪ್ ಚಿತ್ರದ ಮೂಲಕ ಬಾಲಿವುಡ್ ಗೆ ಹಾರಿದ್ದಾರೆ...
ಮೈತ್ರೇಯಿ ಗೌಡ
ಮೈತ್ರೇಯಿ ಗೌಡ

ಚೆನ್ನೈ: ಸ್ಯಾಂಡಲ್ ವುಡ್ ನಟಿ ಮೈತ್ರೇಯಿ ಗೌಡ ಅವರು ಹಿಂದಿಯಲ್ಲಿ ತಯಾರಾಗುತ್ತಿರುವ ಹಾರರ್ ಶ್ರಾಪ್ ಚಿತ್ರದ ಮೂಲಕ ಬಾಲಿವುಡ್ ಗೆ ಹಾರಿದ್ದಾರೆ.

ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವುದು ತುಂಬಾ ಹೆಮ್ಮೆ ಎನಿಸುತ್ತಿದೆ. ಉತ್ತಮ ತಂಡದೊಂದಿಗೆ ಕೆಲಸ ಮಾಡುತ್ತಿದ್ದು, 100 ನಟಿಯರ ಸ್ಕ್ರೀನ್ ಟೆಸ್ಟ್ ನಲ್ಲಿ ನಾನು ಸೆಲೆಕ್ಟ್ ಆಗಿರುವುದು ಖುಷಿಯ ವಿಷಯ ಎಂದು ಹೇಳಿದ್ದಾರೆ.

ಮೈ ಹೂ ರಜನಿಕಾಂತ್ ಹಾಗೂ ಪಾಂಚ್ ಗಂಟೆ ಮೇ ಪಾಂಚ್ ಕ್ರೋರ್ ವಿವಾದಾತ್ಮಕ ಚಿತ್ರಗಳ ನಿರ್ದೇಶಕ ಫೈಸಲ್ ಸೈಫ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಶ್ರಾಪ್ ಚಿತ್ರವನ್ನು ನೀಲಂ ಶರ್ಮಾ ಎಂಟರ್ ಟೈನ್ಮೆಂಟ್ ನಿರ್ಮಿಸುತ್ತಿದ್ದು. ಚಿತ್ರದಲ್ಲಿ ರಾಜ್ ಪಾಲ್ ಯಾದವ್ ಮತ್ತು ರದೇಶ್ಯಂ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com