
ಮುಂಬೈ: ಭಾರತೀಯ-ಬ್ರಿಟಿಶ್ ನಿರ್ದೇಶಕ ಅಸಿಫ್ ಕಪಾಡಿಯಾ ಅವರ 'ದ ವಾರಿಯರ್' ಸಿನೆಮಾದ ಮೂಲಕ ೨೦೦೬ ರಲ್ಲಿ ಅಂತರಾಷ್ಟ್ರೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಇರ್ಫಾನ್ ಖಾನ್ ವಿಶ್ವದ ಎರಡು ಪ್ರಮುಖ ಸಿನೆಮೋದ್ಯಮಗಳ ಭಾಗವಾಗಿರುವದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
"ನನ್ನ ಸಂತಸವನ್ನು ಹೇಳಿಕೊಳ್ಳಲು ಕಷ್ಟ. ಪಶ್ಚಿಮದೇಶಗಳ ಸಿನೆಮಾಗಳಲ್ಲಿ ಭಾರತೀಯರನ್ನು ಅದದೇ ರೀತಿಯಲ್ಲಿ ತೋರಿಸುವುದನ್ನು ಮುರಿಯಲೆಂದು ಅಲ್ಲಿ ನನ್ನನ್ನು ಪರೀಕ್ಷೆಗೆ ಒಡ್ಡಿಕೊಂಡೆ. ಅವರು ನನ್ನನ್ನು ಕೈಬೀಸಿ ಕರೆದರು" ಎಂದು ಇರ್ಫಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅತಿ ದೊಡ್ಡ ಬಜೆಟ್ ನ ವಿದೇಶಿ ಸಿನೆಮಾಗಳಾದ 'ಜುರಾಸಿಕ್ ವರ್ಲ್ಡ್', 'ಎ ಮೈಟಿ ಹಾರ್ಟ್'ನಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ ಇರ್ಫಾನ್ ಈಗ ಬರಲಿರುವ 'ಇನ್ಫರ್ನೋ' ಸಿನೆಮಾದಲ್ಲಿ ಖ್ಯಾತ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಜೊತೆಗೆ ನಟಿಸಲಿದ್ದಾರೆ.
ಬಾಲಿವುಡ್ ನಟನೆಯಲ್ಲೂ ಬಹಳ ಪ್ರಖ್ಯಾತವಾಗಿರುವ 'ಪಿಕು' ನಟ ಎರಡು ಚಿತ್ರರಂಗಳಲ್ಲಿ ತಮಗೆ ಬಂದಿರುವ ಪ್ರಶಂಸೆಗೆ ಧನ್ಯವಾದ ಹೇಳಿದ್ದಾರೆ.
Advertisement