

ಬೆಂಗಳೂರು: ಹಿರಿಯ ನಟ ಸುಂದಪ್ ರಾಜ್ ಹಾಗೂ ನಟಿ ಪ್ರಮೀಳಾ ಜೂಷಾಯ್ ದಂಪತಿ ಮಗಳಾದ ನಟಿ ಮೇಘನಾ ರಾಜ್ ವಿರುದ್ಧ ವ್ಯಕ್ತಿಯೊಬ್ಬ ವಂಚನೆ ಕೇಸು ದಾಖಲಿಸಿದ್ದಾರೆ.
ತಮಿಳುನಾಡು ಮೂಲದ ಜನಾರ್ಧನ್ ಎಂಬುವರು ನಟಿ ಮೇಘನಾ ರಾಜ್ ತಮ್ಮನ್ನು ವಿವಾಹವಾಗಿ, ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ.ಜೊತೆಗೆ ಮದುವೆಯ ದಾಖಲೆಗಳನ್ನು ಕದ್ದಿದ್ದಾರೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮೆಘರಿಕ್ ಅವರಿಗೆ ಇ -ಮೇಲ್ ಮೂಲಕ ದೂರು ನೀಡಿದ್ದಾರೆ.
ದೂರಿನಲ್ಲಿ ನಟಿ ಮೇಘನಾ ರಾಜ್ ತಮ್ಮನ್ನು ವಿವಾಹವಾಗಿ ವಂಚಿಸಿದ್ದಾರೆ. ಜೊತೆಗೆ ಮದುವೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಕದ್ದಿದ್ದಾರೆಂದು ಆರೋಪಿಸಿದ್ದಾರೆ. ಆದರೆ ನಟಿ ಮೇಘನಾ ರಾಜ್ ತಮ್ಮ ವಿರುದ್ಧದ ಈ ದೂರನ್ನು ಅಲ್ಲಗಳೆದಿದ್ದಾರೆ. ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತ ಎಸ್. ಮೆಘರಿಕ್ ಜೆ.ಪಿ ನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ.