ಮಾರ್ಚ್ 19 ಕ್ಕೆ ಲಂಡನ್ ನಲ್ಲಿ ಶಿವಲಿಂಗ ಪ್ರೀಮಿಯರ್ ಶೋ

ಮೊಟ್ಟ ಮೊದಲ ಬಾರಿಗೆ ಲಂಡನ್ ನಲ್ಲಿ ಕನ್ನಡ ಚಿತ್ರವೊಂದನ್ನ ಪ್ರದರ್ಶಿಸಲು ಶಿವಲಿಂಗ ಚಿತ್ರತಂಡ ಮುಂದಾಗಿದೆ.
ಶಿವಲಿಂಗ ಚಿತ್ರದ ಪೋಸ್ಟರ್
ಶಿವಲಿಂಗ ಚಿತ್ರದ ಪೋಸ್ಟರ್

ಮೊಟ್ಟ ಮೊದಲ ಬಾರಿಗೆ ಲಂಡನ್ ನಲ್ಲಿ ಕನ್ನಡ ಚಿತ್ರವೊಂದನ್ನ ಪ್ರದರ್ಶಿಸಲು ಶಿವಲಿಂಗ ಚಿತ್ರತಂಡ ಮುಂದಾಗಿದೆ.

ಮಾರ್ಚ್ 19 ರಂದು ಲಂಡನ್ ನ ಸಫಾರಿ ಸಿನಿಮಾ ಹಾರೋ ಎಂಬಲ್ಲಿ ಸುಮಾರು 650 ಮಂದಿ ಪ್ರೇಕ್ಷಕರಿಗೆ ಶಿವಲಿಂಗ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿದೆ. ಲಂಡನ್ ನ ರಿಯೋಬಿನ್ ರಾಜ್ ಪ್ರೊಡಕ್ಷನ್ ಶಿವಲಿಂಗ ಚಿತ್ರ ತಂಡಕ್ಕೆ ಆಹ್ವಾನ ನೀಡಿದೆ.

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಪ್ರದರ್ಶನಕ್ಕೆ ಲಂಡನ್ ನಿಂದ ಆಹ್ವಾನ ಬಂದಿದೆ. ಬಹು ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರದರ್ಶನಕ್ಕೆ ಆಯೋಜಕರು ನಿರ್ಧರಿಸಿದ್ದಾರೆ. ಈ ಪ್ರೀಮಿಯರ್ ಶೋ ನಲ್ಲಿ ಚಿತ್ರ ತಂಡದ ಕೆಲವರು ಹಾಗೂ ನಟ ಶಿವರಾಜ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ನಿರ್ದೇಶಕ ಪಿ. ವಾಸು ಹೇಳಿದ್ದಾರೆ.

ಇನ್ನು ಶಿವಲಿಂಗ ಚಿತ್ರವನ್ನು ರಿಮೇಕ್ ಮಾಡಲು ಹಲವು ಭಾಷೆಯಿಂದ ಪ್ರಸ್ತಾಪ ಬಂದಿದೆ ಎಂದು ಅವರು ಹೆಚ್ಚಿನ ಮಾಹಿತಿ ನೀಡಲಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com