ಮಾಸ್ಟರ್ ಪೀಸ್ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಶುಭ ಹಾರೈಕೆ
ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ಧಾರೆ.
ಯಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕತ್ರಿಗುಪ್ಪೆಯ ವಾಟರ್‌ಟ್ಯಾಂಕ್ ಬಳಿ ಜನ ಜಾತ್ರೆ. ಅದರಲ್ಲೂ ರಾತ್ರಿ 12 ಗಂಟೆ ಹೊತ್ತಿಗೆ ಜೈಕಾರ ಜೋರಾಗಿ ಮೊಳಗಿತು. ರಸ್ತೆ ಮಧ್ಯೆಯೇ ಸ್ಟೇಜ್ ಹಾಕಿದ ಅಭಿಮಾನಿಗಳು ಕೈಯಲ್ಲಿ ಕೇಕ್ ಹಿಡಿದು ಅಭಿಮಾನ ಮೆರೆದರು. ಶುಕ್ರವಾರ ಹುಟ್ಟುಹಬ್ಬ ಆಚರಿಸಿಕೊಂಡ ಯಶ್ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಹಿಂದಿನ ವರ್ಷಗಳಿಗಿಂತ ಈ ವರ್ಷ ಯಶ್ ಮನೆ ಮುಂದೆ ಜಮಾಯಿಸಿದ್ದ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇತ್ತು. ಕತ್ರಿಗುಪ್ಪೆಯ ಯಶ್ ಮನೆ ರಸ್ತೆ ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್, ಫೋಸ್ಟರ್‌ಗಳಿಂದ ತುಂಬಿತ್ತು. ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಕೋರಲು ಅಭಿಮಾನಿಗಳು ಸಾಲು ಗಟ್ಟಿದ್ದರು.
ರಾಕಿಂಗ್ ಸ್ಟಾರ್ ಯಶ್ ಎಂಬ ಸ್ಟಾರ್ ಆಕಾರದ ಕೇಕ್‌ನಿಂದ ಹಿಡಿದು ವಿವಿಧ ಬಗೆಯ ಕೇಕ್‌ನೊಂದಿಗೆ ಅಭಿಮಾನಿಗಳು ತಮ್ಮ ಅಭಿಮಾನ ಪ್ರದರ್ಶಿಸಿದರು. ಕೇಕ್ ಕತ್ತರಿಸಿದ ಯಶ್, ಅಭಿಮಾನಳ ಪ್ರೀತಿಗೆ ನಾನು ಚಿರಋಣಿ. ನಿಮ್ಮ ಪ್ರೀತಿ ಇದ್ದರೆ ಮುಂದೆಯೂ ಒಳ್ಳೆಯ ಸಿನಿಮಾಗಳನ್ನು ಕೊಡುತ್ತೇನೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ