ಇಳಯರಾಜಾರಿಗೆ ಪ್ರತಿಷ್ಠಿತ ನಿಶಾಗಂಧಿ ಪ್ರಶಸ್ತಿ ನೀಡಿ ಗೌರವಿಸಿದ ಕೇರಳ
ತಿರುವನಂತಪುರ: ಭಾರತೀಯ ಚಿತ್ರರಂಗದಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಸಂಗೀತ ಮಾಂತ್ರಿಕ ಇಳಯರಾಜಾ ಅವರ ಸಾಧನೆಯನ್ನು ಗುರುತಿಸಿರುವ ಕೇರಳ ಸರ್ಕಾರ ಅವರಿಗೆ ನಿಶಾಗಂಧಿ ಪ್ರಶಸ್ತಿ ನೀಡಿ ಗೌರವಿಸಿತು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ನಿಶಾಗಂಧಿ ವಾರ್ಷಿಕ ನೃತ್ಯ ಮತ್ತು ಸಂಗೀತೋತ್ಸವ ಕಾರ್ಯಕ್ರಮವನ್ನು ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಅವರು ಉದ್ಘಾಟಿಸಿದರು. ಬಳಿಕ ಇಳಯರಾಜಾ ಅವರಿಗೆ ನಿಶನ್ ಗಾಂಧಿ ಪ್ರಶಸ್ತಿ ನೀಡಿ ಗೌರವಿಸಿದರು. ಈ ಪುರಸ್ಕಾರ 1.50 ಲಕ್ಷ ಮೊತ್ತ ಹೊಂದಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಾಂಡಿ ಅವರು, ಕೇರಳದಲ್ಲಿ ಸಂಗೀತ ಅಕಾಡೆಮಿಯನ್ನು ಸ್ಥಾಪಿಸಲು ಇಳಯರಾಜಾ ಅವರಿಗೆ ಐದು ಎಕರೆ ಭೂಮಿಯನ್ನು ನೀಡುವುದಾಗಿ ಘೋಷಿಸಿದರು.
ಬಳಿಕ ಮಾತನಾಡಿದ ಇಳಯರಾಜಾ ಅವರು, ನನ್ನ ಸಾಧನೆಯನ್ನು ಗುರುತಿಸಿ ಗೌರವಿಸಿರುವ ಕೇರಳ ಸರ್ಕಾರಕ್ಕೆ ಧನ್ಯವಾದಗಳು. ಅಲ್ಲದೆ ಸಂಗೀತ ಅಕಾಡೆಮಿ ಸ್ಥಾಪನೆಗೆ ಕೇರಳ ಸರ್ಕಾರ ಭೂಮಿ ನೀಡುತ್ತಿದ್ದು, ಅಂತಾ ಅಕಾಡೆಮಿಯಿಂದ ಇಳಯರಾಜಾರಂತ ನೂರಾರು ಪ್ರತಿಭೆಗಳು ಹುಟ್ಟಲಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ