
ಬೆಂಗಳೂರು: ಹಿಂದಿ ಸಿನೆಮಾ 'ಓ ಮೈ ಗಾಡ್' ನ ರಿಮೇಕ್ ಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಮೊದಲಿಗೆ ಈ ಸಿನೆಮಾದ ಕನ್ನಡ ಅವತರಿಣಿಕೆಯನ್ನು 'ಕೃಷ್ಣ ನೀ ಬೇಗನೆ ಬಾರೋ' ಎಂದಿತ್ತಾದರೂ, ಈಗ 'ಮುಕುಂದ ಮುರಾರಿ' ಎಂದು ಬದಲಿಸಲಾಗುದೆ. ಇದರ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಮೂಲಗಳ ಪ್ರಕಾರ ''ಕೃಷ್ಣ ನೀ ಬೇಗನೆ ಬಾರೋ' ಹೆಸರು ಅತಿ ಸಾಮಾನ್ಯ ಎಂದೆನಿಸಿದ್ದರಿಂದ 'ಮುಕುಂದ ಮುರಾರಿ' ಎಂದು ಬದಲಿಸಲಾಗಿದೆ ಎಂದು ತಿಳಿದುಬಂದಿದೆ.
ನಂದಕಿಶೋರ್ ನಿರ್ದೇಶನದ ಈ ಸಿನೆಮಾದಲ್ಲಿ ಇಬ್ಬರು ಜನಪ್ರಿಯ ನಟರು ಒಟ್ಟಿಗೆ ಬಂದಿರುವುದು ವಿಶೇಷ. ಉಪೇಂದ್ರ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ ಈ ಸಿನೆಮಾ ಫೆಬ್ರವರಿ ೧೧ಕ್ಕೆ ಚಿತ್ರೀಕರಣ ಪ್ರಾರಂಭಿಸಲಿದೆ ಎನ್ನಲಾಗಿದೆ.
ನಾಯಕ ನಟಿಯ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಉಪೇಂದ್ರ ಎದುರು ನಟಿಸಲು 'ಪ್ರೇಮ' ಅವರ ಜೊತೆಗೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಅಲ್ಲದೆ ಸದಾ, ರಮ್ಯಕೃಷ್ಣ ಇವರ ಹೆಸರುಗಳೂ ಚಾಲ್ತಿಯಲ್ಲಿವೆ. ಹಿಂದಿ ಅವತರಿಣೆಕೆಯಲ್ಲಿ ಪತ್ರಕರ್ತೆ ಪಾತ್ರ ವಹಿಸಿದ್ದ ನಿಧಿ ಸುಬ್ಬಯ್ಯ ಅವರೇ ಕನ್ನಡದಲ್ಲೂ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರವಿಶಂಕರ್, ಅವಿನಾಶ್ ಕೂಡ ತಾರಗಣದಲ್ಲಿದ್ದು, ಅರ್ಜುನ್ ಜನ್ಯ ಸಂಗೀತ ಸಿನೆಮಾಗಿದೆ.
Advertisement