ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನ 3ನೇ ಸೀಸನ್ ನಲ್ಲಿ ನಟಿ ಶ್ರುತಿ ಗೆದ್ದಿದ್ದಾರೆ. ರನ್ನರ್ ಅಪ್ ಆಗಿ ನಟ ಚಂದನ್ ಪ್ರಬಲ ಸ್ಪರ್ಥೆ ನೀಡಿದ್ದರು.
ಶೋನ ಅಷ್ಟೂ ದಿನಗಳಲ್ಲಿ ತಾಳ್ಮೆ ಕಳೆದುಕೊಳ್ಳದೆ, ಈ ಮೂಲಕ ಶ್ರುತಿ ಕನ್ನಡದ ಬಿಗ್ ಬಾಸ್ ಗೆದ್ದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಕಾರ್ಯಕ್ರಮದ ನಿರೂಪಕ ಸುದೀಪ್ ಅವರು ಬಿಗ್ ಬಾಸ್ ವಿಜೇತರನ್ನು ಘೋಷಿಸಿದರು.
ಶೋನ ವಿನ್ನರ್ ತಾನೆ ಎಂದು ಗೊತ್ತಾದಾಗ ನಟಿ ಶ್ರುತಿ ಭಾವುಕರಾಗಿ ಪ್ರೇಕ್ಷಕರತ್ತ ತಲೆಬಾಗಿದರು. ರೆಹಮಾನ್ ಅಥವಾ ಮಾಸ್ಟರ್ ಆನಂದ್ ಗೆಲ್ಲುತ್ತಾರೆಂದೇ ಹೇಳಲಾಗುತ್ತಿತ್ತು. ಆದರೆ ಫಲಿತಾಂಶದಲ್ಲಿ ಶ್ರುತಿ ಅವರ ಸಂಯಮಕ್ಕೆ ಗೌರವ ಸಿಕ್ಕಿತು.
ಬಿಗ್ ಬಾಸ್ ಪಟ್ಟವನ್ನು ಅಲಂಕರಿಸಿದ ಶ್ರುತಿ ಅವರಿಗೆ ವಾಹಿನಿ ಕಡೆಯಿಂದ 50 ಲಕ್ಷ ರುಪಾಯಿಯನ್ನು ಬಹುಮಾನವಾಗಿ ನೀಡಲಾಯಿತು.
Advertisement