

2007ರಲ್ಲಿ ತೆರೆಗೆ ಬಂದ ದುನಿಯಾ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೂಳೆಬಿಸ್ಸಿತ್ತು. ಇದೀಗ ದುನಿಯಾ-2 ಚಿತ್ರ ತೆರೆಗೆ ತರಲು ನಿರ್ಮಾಪಕ ಟಿಪಿ ಸಿದ್ಧರಾಜು ಮುಂದಾಗಿದ್ದು, ದುನಿಯಾದಲ್ಲಿ ವಿಲನ್ ಆಗಿದ್ದ ಲೂಸ್ ಮಾದ ಯೋಗಿ ದುನಿಯಾ-2ನಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ದುನಿಯಾ-2 ಚಿತ್ರ ನಿರ್ಮಾಣದ ಮೂಲಕ ಯೋಗಿ ಹುಟ್ಟುಹಬ್ಬಕ್ಕೆ ತಂದೆ ಟಿಪಿ ಸಿದ್ಧರಾಜು ಅವರು ದೊಡ್ಡ ಗಿಫ್ಟ್ ನೀಡುತ್ತಿದ್ದಾರೆ. ಚಿತ್ರವನ್ನು ನವ ಪ್ರತಿಭೆ ಹರಿ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ.
ದುನಿಯಾ ಚಿತ್ರಕ್ಕೂ ದುನಿಯಾ-2 ಚಿತ್ರಕ್ಕೂ ಯಾವುದೇ ಹೋಲಿಕೆ ಇರುವುದಿಲ್ಲ. ಇಲ್ಲಿ ಶೀರ್ಷಿಕೆಯನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಚಿತ್ರ ಸಂಪೂರ್ಣವಾಗಿ ಕೆಆರ್ ಮಾರುಕಟ್ಟೆಯಲ್ಲಿ ಎಂದು ನಟ ಯೋಗಿ ಹೇಳಿದ್ದಾರೆ.
ದುನಿಯಾ ಚಿತ್ರವನ್ನು ಸೂರಿ ಅವರು ನಿರ್ದೇಶಿಸಿದ್ದರು. ದುನಿಯಾ-2 ಚಿತ್ರವನ್ನು ಹರಿ ಎಂಬುವರು ನಿರ್ದೇಶಿಸುತ್ತಿದ್ದು, ಚಿತ್ರಕಥೆಯನ್ನು ಯೋಗಿ ಅವರೇ ಬರೆದಿದ್ದು, ಪ್ರಸ್ತುತ ಸಮಾಜದ ಚಿತ್ರವನ್ನು ಚಿತ್ರ ಹೊಂದಿರುತ್ತದೆ ಎಂದು ಯೋಗಿ ಹೇಳಿದರು.
ದುನಿಯಾ-2 ಚಿತ್ರದಲ್ಲಿ ಇತಾ ಚಂದ್ರಶೇಖರ್ ಅವರು ನಟಿಯಾಗಿ ನಟಿಸುತ್ತಿದ್ದಾರೆ. ಇತಾ ಅವರು ಯೋಗಿ ಅಭಿನಯದ 25ನೇ ಚಿತ್ರ ಸ್ನೇಕ್ ನಾಗ ಚಿತ್ರದಲ್ಲಿ ನಟಿಯಾಗಿದ್ದು, ದುನಿಯಾ-2 ಚಿತ್ರಕ್ಕೂ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.