ಚೇತರಿಸಿಕೊಂಡು ಚಿತ್ರೀಕರಣಕ್ಕೆ ರವಿಚಂದ್ರನ್ ಜೊತೆ ಸೆಟ್ ಸೇರಿದ ಸುದೀಪ್

'ಹೆಬ್ಬುಲಿ' ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದ ಸುದೀಪ್ ಚೇತರಿಸಿಕೊಂಡಿದ್ದಾರೆ. ಇಂದು ಅವರು ಚಿತ್ರೀಕರಣಕ್ಕೆ ಹಿಂದಿರುಗಲಿದ್ದು, ಈಗಾಗಲೇ ತಮ್ಮ ಭಾಗದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ
ರವಿಚಂದ್ರನ್ ಮತ್ತು ಸುದೀಪ್
ರವಿಚಂದ್ರನ್ ಮತ್ತು ಸುದೀಪ್
Updated on: 
ಬೆಂಗಳೂರು: 'ಹೆಬ್ಬುಲಿ' ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದ ಸುದೀಪ್ ಚೇತರಿಸಿಕೊಂಡಿದ್ದಾರೆ. ಇಂದು ಅವರು ಚಿತ್ರೀಕರಣಕ್ಕೆ ಹಿಂದಿರುಗಲಿದ್ದು, ಈಗಾಗಲೇ ತಮ್ಮ ಭಾಗದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ರಚಿಚಂದ್ರನ್ ಅವರ ಜೊತೆಗೆ ಸೆಟ್ ನಲ್ಲಿ ಸೇರಲಿದ್ದಾರೆ. "ಸುದೀಪ್ ಆರೋಗ್ಯವಾಗಿದ್ದಾರೆ" ಎನ್ನುತ್ತಾರೆ ನಿರ್ದೇಶಕ ಕೃಷ್ಣ.
ರವಿಚಂದ್ರನ್ ಆಗಲೇ ತಮ್ಮ ಪಾತ್ರದೊಳಗೆ ಹೊಕ್ಕಿದ್ದಾರಂತೆ. 'ಹೆಬ್ಬುಲಿ'ಯಲ್ಲಿ ಅವರು ಸುದೀಪ್ ಸಹೋದರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಇದೇ ಮೊದಲಾಗಿರುವುದರಿಂದ ಅಭಿಮಾನಿಗಳ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಹಿಂದೆ ರವಿಚಂದ್ರನ್ 'ಮಾಣಿಕ್ಯ'ದಲ್ಲಿ ಸುದೀಪ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರವಿಚಂದ್ರನ್ ಅವರ 'ಅಪೂರ್ವ'ದಲ್ಲಿ ಸುದೀಪ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. 
'ಹೆಬ್ಬುಲಿ'ಯ ವಿವಿಧ ದೃಶ್ಯಗಳಿಗೆ ರವಿಚಂದ್ರನ್ ಅವರ ನೋಟ ಹೆಚ್ಚೇನು ಬದಲಾಗುತ್ತಿಲ್ಲವಂತೆ. ಅವರು ನೃತ್ಯ ರಿಯಾಲಿಟಿ ಕಾರ್ಯಕ್ರಮ ಮತ್ತು ಸಿನೆಮಾ ಚಿತ್ರೀಕರಣಗಳಲ್ಲಿ ಸಮಾನಾಂತರವಾಗಿ ತೊಡಗಿಸಿಕೊಂಡಿದ್ದಾರೆ. "ಆದುದರಿಂದ ಅವರಿಗೆ ವಿಭಿನ್ನ ನೋಟಕ್ಕೆ ಸಜ್ಜು ಮಾಡುವುದು ಕಷ್ಟ" ಎಂದು ವಿವರಿಸುತ್ತಾರೆ ಕೃಷ್ಣ. 
ಒಂದೇ ಹಂತದ ಚಿತ್ರೀಕರಣದ ಸಿದ್ಧತೆ ನಡೆಸಿರುವ ಈ ಸಿನೆಮಾವನ್ನು ಉಮಾಪತಿ ಪ್ರೊಡಕ್ಷನ್ಸ್ ಮತ್ತು ಎಸ್ ಆರ್ ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. 
ಅಮಲಾ ಪೌಲ್ ನಾಯಕನಟಿಯಾಗಿದ್ದು, ರವಿಶಂಕರ್, ಕಬೀರ್ ದುಹಾನ್ ಸಿಂಗ್ ಮತ್ತು ರವಿ ಕೃಷ್ಣನ್ ತಾರಾಗಣದಲ್ಲಿದ್ದಾರೆ. ಇ ಕರುಣಾಕರನ್ ಸಿನೆಮ್ಯಾಟೋಗ್ರಾಫಿ ಚಿತ್ರಕ್ಕಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com