ಶಿವಣ್ಣ ಅಭಿನಯದ ಟಗರು ಚಿತ್ರದಲ್ಲಿ ಧನಂಜಯ್ ವಿಲನ್

ಟಗರು ಚಿತ್ರದಿಂದ ಇನ್ನೊಂದು ಇಂಟರೆಸ್ಟಿಂಗ್ ಸುದ್ದಿ ಬಂದಿದೆ. ಅದೇನೆಂದರೆ, ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರೆದುರು ವಿಲನ್ ಆಗಿ ಡೈರೆಕ್ಟರ್ಸ್ ಸ್ಪೆಷಲ್ ಖ್ಯಾತಿಯ ಧನಂಜಯ್‌...
ಧನಂಜಯ್
ಧನಂಜಯ್

ಬೆಂಗಳೂರು: ಶಿವರಾಜ್‌ಕುಮಾರ್ ಅಭಿನಯದ  ಟಗರು ಚಿತ್ರದಿಂದ ಇನ್ನೊಂದು ಇಂಟರೆಸ್ಟಿಂಗ್ ಸುದ್ದಿ ಬಂದಿದೆ. ಅದೇನೆಂದರೆ, ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರೆದುರು ವಿಲನ್ ಆಗಿ ಡೈರೆಕ್ಟರ್ಸ್ ಸ್ಪೆಷಲ್ ಖ್ಯಾತಿಯ ಧನಂಜಯ್‌ ಆಯ್ಕೆಯಾಗಿದ್ದಾರೆ.

ಈಗಾಗಲೇ ಸೂರಿ ಆಫರ್ ಕೊಟ್ಟಿದ್ದೂ ಆಗಿದೆ, ಅದಕ್ಕೆ ಧನಂಜಯ ಒಪ್ಪಿಕೊಂಡಿದ್ದೂ ಆಗಿದೆ. ಧನಂಜಯ್ ಅವರನ್ನ ಸೂರಿ ಭೇಟಿ ಮಾಡಿ ಈ ವಿಷಯ ತಿಳಿಸಿದಾಗ ಅವರು ತುಂಬಾ ಎಕ್ಸೈಟ್ ಆದರು, ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಧನಂಜಯ್ ಗೆ ಎಲ್ಲಾ ರೀತಿಯ ಪಾತ್ರಗಳಲ್ಲೂ ಅಭಿನಯಿಸಬೇಕೆಂಬ ಆಸೆಯಿದೆಯಂತೆ. ಪಾತ್ರದ ಬಗ್ಗೆ ವಿವರಣೆ ನೀಡಿದಾಗ ಧನಂಜಯ್ ಖುಷಿಯಿಂದ ಒಪ್ಪಿಕೊಂಡರು. ಈ ವಿಷಯವನ್ನು ಶಿವಣ್ಣ ಬಳಿ ಚರ್ಚಿಸಿದಾಗ ಶಿವಣ್ಣ ಫುಲ್ ಥ್ರಿಲ್ ಆದರು ಎಂದು ನಿರ್ದೇಶಕ ಸೂರಿ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಧನಂಜಯ್ ಅವರ ಪಾತ್ರವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಧನಂಜಯ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎಂಬುದು ಬಿಟ್ಟರೆ, ಮಿಕ್ಕಂತೆ ಬೇರೆ ಯಾವ ವಿಷಯವೂ ಗೊತ್ತಾಗಿಲ್ಲ. ಸದ್ಯಕ್ಕೆ ಸೂರಿ, ಧನಂಜಯ್ ಅವರ ಪಾತ್ರವನ್ನು ಗೌಪ್ಯವಾಗಿಟ್ಟಿದ್ದಾರೆ.

ಟಗರು - ಮೈಯಲ್ಲಾ ಪೊಗರು' ಚಿತ್ರವು ಆಗಸ್ಟ್ 21ರಂದು ಶುರುವಾಗಲಿದೆ. ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಇನ್ನು ಸೂರಿಯೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಚರಣ್ ರಾಜ್ ಅವರ ಸಂಗೀತವಿದೆ.  ಮಾನ್ವಿತಾ ಹರೀಶ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com