ಬಿ ಗ್ರೇಡ್ ಚಿತ್ರಗಳಿಗೆ ಗುಡ್ ಬೈ ಹೇಳಿದ ಶಾರದಾ ಚಿತ್ರಮಂದಿರ; ಕೋಟಿಗೊಬ್ಬ-2 ರಿಂದ ಮರುಪ್ರಾರಂಭ

ಕಾರ್ಪೊರೇಶನ್ ವೃತ್ತದ ಬಳಿಯಿರುವ 70 ವರ್ಷದ ಹಳೆಯ ಶಾರದಾ ಚಿತ್ರಮಂದಿರ ಜೀರ್ಣೋದ್ಧಾರಕ್ಕೆ ಸಿದ್ಧವಾಗುತ್ತಿದೆ.
ನವೀಕರಿಸಲಾಗುತ್ತಿರುವ ಶಾರದಾ ಚಿತ್ರಮಂದಿರ
ನವೀಕರಿಸಲಾಗುತ್ತಿರುವ ಶಾರದಾ ಚಿತ್ರಮಂದಿರ
ಬೆಂಗಳೂರು: ಕಾರ್ಪೊರೇಶನ್ ವೃತ್ತದ ಬಳಿಯಿರುವ 70 ವರ್ಷದ ಹಳೆಯ ಶಾರದಾ ಚಿತ್ರಮಂದಿರ ಜೀರ್ಣೋದ್ಧಾರಕ್ಕೆ ಸಿದ್ಧವಾಗುತ್ತಿದೆ. 
ಹಲವಾರು ಜನಪ್ರಿಯ ಕನ್ನಡ, ತೆಲುಗು ಮತ್ತು ತಮಿಳು ಸಿನೆಮಾಗಳನ್ನು ಪ್ರದರ್ಶಿಸುತ್ತಿದ್ದ ಈ ಚಿತ್ರಮಂದಿರ ಕೊನೆ ಕೊನೆಗೆ ಬಿ ಗ್ರೇಡ್ ಚಿತ್ರಗಳ ಪ್ರದರ್ಶನಕ್ಕೆ ಸೀಮಿತವಾಗಿತ್ತು. 
ಈ ಜೀರ್ಣೋದ್ಧಾರದ ನಂತರ ಸುದೀಪ್ ನಟನೆಯ ಕೋಟಿಗೊಬ್ಬ 2 ಸಿನೆಮಾ ಆಗಸ್ಟ್ 12 ರಂದು ಈ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಮೂಲಕ, ಮತ್ತೆ ಪ್ರದರ್ಶನ ಪ್ರಾರಂಭಿಸಲಿದೆ. 
ನಿರ್ಮಾಪಕ ಮತ್ತು ವಿತರಕ ಜ್ಯಾಕ್ ಮಂಜು ಈ ಚಿತ್ರಮಂದಿರವನ್ನು ಮುಂದಿನ ಹತ್ತು ವರ್ಷಗಳವರೆಗೆ ಭೋಗ್ಯಕ್ಕೆ ಪಡೆದಿದ್ದು, ನವೀಕರಿಸುವುದಕ್ಕೆ ಒಂದು ವರೆ ಕೋಟಿ ವ್ಯಯಿಸಿದ್ದಾರಂತೆ. ನವೀಕರಿಸಿದ ನಂತರ ಈ ಚಿತ್ರಮಂದಿರಕ್ಕೆ ಮಲ್ಟಿ ಪ್ಲೆಕ್ಸ್ ರೀತಿಯ ನೋಟ ಸಿಗಲಿದ್ದು, 550 ಆಸನಗಳಿರಲಿವೆ ಎನ್ನುತ್ತಾರೆ. 
ಆಸುಪಾಸಿನಲ್ಲಿರುವ ಮೆಜೆಸ್ಟಿಕ್, ಪಲ್ಲವಿ, ಅಪ್ಸರಾ, ತ್ರಿಭುವನ್ ಮತ್ತು ಕೈಲಾಶ್ ಕೂಡ ಸದ್ಯಕ್ಕೆ ಪ್ರದರ್ಶನಗಳಿಲ್ಲದೆ ಮುಚ್ಚಿವೆ. 
ಇಂತಹ ಸಮಯದಲ್ಲಿ ಮಂಜು ಭಾರಿ ಹೂಡಿಕೆ ಮಾಡಿದ್ದೇಕೆ? "ಗಾಂಧಿನಗರ ಸುತ್ತಮುತ್ತ ಸ್ವತಂತ್ರ ಚಿತ್ರಮಂದಿರಗಳ ಬಾಡಿಗೆ ವಾರಕ್ಕೆ 5 ಲಕ್ಷ ಮೀರುತ್ತಿದೆ. ಆದುದರಿಂದ ಈ ಥಿಯೇಟರ್ ನಲ್ಲಿ ಮಲ್ಟಿಪ್ಲೆಕ್ಸ್ ಸೌಲಭ್ಯಗಳನ್ನು ನೀಡಲು ಬದಲಾಯಿಸಿದೆ. ಇದನ್ನು 2.5 ಲಕ್ಷಕ್ಕೆ ಬಾಡಿಗೆ ನೀಡಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದೇನೆ" ಎನ್ನುತ್ತಾರೆ. 
ಹಾಗೆಯೇ ರಾತ್ರಿ ಪ್ರದರ್ಶನದಲ್ಲಿ ಬೆಂಗಾಲಿ ಮತ್ತು ಮರಾಠಿ ಸಿನೆಮಾಗಳ ಪ್ರದರ್ಶನಕ್ಕೆ ಒಲವು ತೋರುತ್ತಾರೆ ಮಂಜು "ಈ ಪ್ರದೇಶದ ಸುತ್ತಮುತ್ತ ಸುಮಾರು 50 ಸಾವಿರ ಬೆಂಗಾಲಿಗಳು ಮಾತು ಉತ್ತರ ಭಾರತೀಯರು ಇದ್ದಾರೆ. ಅವರಿಗೂ ಪ್ರದರ್ಶನಗಳನ್ನು ಏರ್ಪಡಿಸಬೇಕು. ಆದರೆ ನನ್ನ ಆದ್ಯತೆ ಕನ್ನಡ ಸಿನೆಮಾಗಳಿಗೆ. ಆದುದರಿಂದಲೇ ಮೊದಲ ಚಿತ್ರವಾಗಿ ಕೋಟಿಗೊಬ್ಬ 2 ಬಿಡುಗಡೆ ಮಾಡುತ್ತಿರವುದು" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com