ಅವರು ಸ್ವತಂತ್ರವಾಗಿ ಸಂಗೀತ ನೀಡಿದ್ದ 'ಛೋಟೆ ನವಾಬ್' 1961 ರಲ್ಲಿ ತೆರೆ ಕಂಡಿತ್ತು. ನಂತರ 350ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನೀಡಿದ ಬರ್ಮನ್ 'ಶೋಲೆ', 'ಕಟಿಪತಂಗ್', 'ತೀಸ್ರಿ ಮಂಜಿಲ್', 'ಸನಮ್ ತೇರೇ ಕಸಮ್', 'ಸತ್ತೆ ಪೆ ಸತ್ತಾ', 'ರಾಕಿ', 'ಆಪ್ ಕಿ ಕಸಮ್' ಮುಂತಾದ ಬ್ಲಾಕ್ ಬಸ್ಟರ್ ಸಿನೆಮಾಗಳ ಸಂಗೀತ ನಿರ್ದೇಶಕ.