ತೆಲುಗಿನ ಟಿವಿ ನಿರೂಪಕಿ ನಿರೋಶಾ ಆತ್ಮಹತ್ಯೆಗೆ ಶರಣು

ತೆಲುಗಿನ ಮ್ಯೂಸಿಕ್ ವಾಹಿನಿಯ ನಿರೂಪಕಿ ನಿರೊಶಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಕಂದರಾಬಾದ್ ನಲ್ಲಿ ನಡೆದಿದೆ...
ನಿರೋಶಾ
ನಿರೋಶಾ
Updated on

ಹೈದರಾಬಾದ್: ತೆಲುಗಿನ ಮ್ಯೂಸಿಕ್ ವಾಹಿನಿಯ ನಿರೂಪಕಿ ನಿರೊಶಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಕಂದರಾಬಾದ್ ನಲ್ಲಿ ನಡೆದಿದೆ.

ಸಿಕಂದರಾಬಾದ್ ನ ಸಿಂಧೀ ಕಾಲೋನಿಯ ಖಾಸಗಿ ಹಾಸ್ಟೆಲ್ ನಲ್ಲಿ ತಂಗಿದ್ದ 23 ವರ್ಷದ ನಿರೋಷ ತನ್ನ ಕೊನೆಯಲ್ಲೇ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರೋಷ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದನ್ನು ಆಕೆಯ ಸ್ನೇಹಿತೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ರಾಮ್ ಗೋಪಾಲಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಡಿ ಕೃಷ್ಣ ಮೋಹನ್ ಹೇಳಿದ್ದಾರೆ.

ನಿರೋಷ ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಪ್ರಾಥಮಿಕ ತನಿಖೆಯಿಂದ ನಿರೋಷ ಅತಿಯಾದ ಹೊಟ್ಟೆ ನೋವಿನಿಂದ ಕೆಲ ದಿನಗಳಿಂದ ಬಳಲುತ್ತಿದ್ದರು. ಈ ದುಡುಕಿನ ನಿರ್ಧಾರ ಕೈಗೊಳ್ಳುವ ಮುನ್ನ ಕಳೆದ ರಾತ್ರಿ ಪೋಷಕರಿಗೆ ಹಾಗೂ ಪ್ರಿಯಕರನಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರೋಷ ಆಂಧ್ರ ಪ್ರದೇಶದ ಚಿತ್ತೂರಿನ ಸೋಮಲ ಮಂಡಲದ ಮೂಲದವರಾಗಿದ್ದಾರೆ. ಇನ್ನು ಐಪಿಸಿ ಸೆಕ್ಷನ್ 174ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com