ನಂದಿಬೆಟ್ಟಕ್ಕೆ ನಟ ಪುನೀತ್ ಸೈಕ್ಲಿಂಗ್

ಸದ್ಯ ಚಕ್ರವ್ಯೂಹ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ಪುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಳಗ್ಗೆ ಸ್ನೇಹಿತರೊಂದಿಗೆ ನಂದಿಬೆಟ್ಟಕ್ಕೆ ಸೈಕ್ಲಿಂಗ್ ಹೊರಟರು...
ಪುನೀತ್ ರಾಜ್ ಕುಮಾರ್ ಹಾಗೂ ಸ್ನೇಹಿತರು
ಪುನೀತ್ ರಾಜ್ ಕುಮಾರ್ ಹಾಗೂ ಸ್ನೇಹಿತರು

ಬೆಂಗಳೂರು: ಸದ್ಯ ಚಕ್ರವ್ಯೂಹ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ಪುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಳಗ್ಗೆ ಸ್ನೇಹಿತರೊಂದಿಗೆ ನಂದಿಬೆಟ್ಟಕ್ಕೆ ಸೈಕ್ಲಿಂಗ್ ಹೊರಟರು.

ಬೆಳಗ್ಗೆ 4 ಗಂಟೆಗೆ ಸದಾಶಿವನಗರ ಮನೆಯಿಂದ ಹೊರಟ ಪುನೀತ್ ಸ್ನೇಹಿತರೊಂದಿಗೆ ಸೇರಿ 5.45ಕ್ಕೆ ನಂದಿಬೆಟ್ಟಕ್ಕೆ ಸೈಕ್ಲಿಂಗ್ ಹೊರಟರು. 44 ಕಿ.ಮೀ ದೂರವನ್ನು ನಾನ್ ಸ್ಟಾಪ್ ಸೈಕ್ಲಿಂಗ್ ಮಾಡಿದ ಪುನೀತ್ ಕೇವಲ 2 ಗಂಟೆ 15 ನಿಮಿಷದಲ್ಲಿ ನಂದಿಬೆಟ್ಟ ತಲುಪಿದರು.

ಸದಾಶಿವನಗರದಿಂದ ಹೆಬ್ಬಾಳ ಮೂಲಕ ಯಲಹಂಕ ತಲುಪಿದ ಪುನೀತ್ ನಂತರ ನಂದಿಬೆಟ್ಟದ ಹಾದಿ ತುಳಿದರು. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಪುನೀತ್ ರಾಜ್ ಕುಮಾರ್ ಬಿಡುವಿನ ವೇಳೆ ತಮ್ಮ ಸ್ನೇಹಿತರೊಂದಿಗೆ ಸೇರಿ ಮೋಜು ಮಸ್ತಿ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com