ಪಾರ್ಟಿ ವೇಳೆ ಅಶ್ಲೀಲ ಚಟುವಟಿಕೆ; ಟಾಲಿವುಡ್ ನಟ ನವ್ದೀಪ್ ವಿರುದ್ಧ ಪ್ರಕರಣ ದಾಖಲು

ಟಾಲಿವುಡ್ ನಟ ನವ್ದೀಪ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿದ್ದು, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ನಡೆಸಿದ ಜಂಟಿ...
ನವ್ದೀಪ್
ನವ್ದೀಪ್

ಚಕ್ರಪಾಲೆಂ: ಟಾಲಿವುಡ್ ನಟ ನವ್ದೀಪ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿದ್ದು, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಅಶ್ಲೀಲ ಚಟುವಟಿಕೆಗಳು ಬಯಲಾಗಿವೆ.

ಕಳೆದ ರಾತ್ರಿ ರಂಗಾರೆಡ್ಡಿ ಜಿಲ್ಲೆಯ ಚಕ್ರಪಾಲೆಂ ನ ಮೊಮ್ಮಿನ್ ಪೇಟ್ ಪೊಲೀಸ್ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ನವ್ದೀಪ್ ಆಯೋಜಿಸಿದ್ದ ಪಾರ್ಟಿಯಲ್ಲಿ ಟಾಲಿವುಡ್ ನ ಕೆಲ ಕಲಾವಿದರು ಅಶ್ಲೀಲ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಪೊಲೀಸರು ದಾಳಿ ವೇಳೆ ಕೆಲವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ದಾಳಿ ವೇಳೆ ಡಿಜೆ ಉಪಕರಣ ಮತ್ತು ವಿದೇಶಿ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಪಾರ್ಟಿಯನ್ನು ಆಯೋಜಿಸಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com