ಲಂಡನ್ ಸವಿನೆನಪುಗಳೊಂದಿಗೆ ಹಿಂದಿರುಗಿದ 'ಕೋಹಿನೂರ್' ಶಿವಣ್ಣ

ಲಂಡನ್ ನಲ್ಲಿ ಕನ್ನಡಿಗರಿಂದ ಸನ್ಮಾನ ಮಾಡಿಸಿಕೊಂಡು, ಪ್ರವಾಸ ಮುಗಿಸಿ ಹಿಂದಿರುಗಿರುವ ನಟ ಶಿವರಾಜ್ ಕುಮಾರ್ ಅಲ್ಲಿನ ಜನರ ಉತ್ಸಾಹ, ಪ್ರೀತಿ ಕಂಡು ಬೆರಗಾಗಿದ್ದಾರಂತೆ.
ಲಂಡನ್ ನಲ್ಲಿ ಕನ್ನಡಿಗರಿಂದ ಸನ್ಮಾನ ಸ್ವೀಕರಿಸಿದ ನಟ ಶಿವರಾಜ್ ಕುಮಾರ್
ಲಂಡನ್ ನಲ್ಲಿ ಕನ್ನಡಿಗರಿಂದ ಸನ್ಮಾನ ಸ್ವೀಕರಿಸಿದ ನಟ ಶಿವರಾಜ್ ಕುಮಾರ್

ಬೆಂಗಳೂರು: ಲಂಡನ್ ನಲ್ಲಿ ಕನ್ನಡಿಗರಿಂದ ಸನ್ಮಾನ ಮಾಡಿಸಿಕೊಂಡು, ಪ್ರವಾಸ ಮುಗಿಸಿ ಹಿಂದಿರುಗಿರುವ ನಟ ಶಿವರಾಜ್ ಕುಮಾರ್ ಅಲ್ಲಿನ ಜನರ ಉತ್ಸಾಹ, ಪ್ರೀತಿ ಕಂಡು ಬೆರಗಾಗಿದ್ದಾರಂತೆ.

ತಮ್ಮ ಪ್ರವಾಸದ ಬಗ್ಗೆ ಮಾತನಾಡಿದ ಶಿವಣ್ಣ "ನಾನು ಲಂಡನ್ ಗೆ ೧೫ ವರ್ಷಗಳ ನಂತರ ಹೋಗಿದ್ದು. ಕೊನೆಯ ಬಾರಿ ಅಲ್ಲಿಗೆ ತೆರಳಿದ್ದು 'ಯುವರಾಜ' ಚಿತ್ರೀಕರಣಕ್ಕೆ. ಇಷ್ಟು ವರ್ಷಗಳ ನಂತರವೂ ಆ ಪ್ರದೇಶ ಸಾಮಾನ್ಯವಾಗಿ ಬದಲಾಗಿಲ್ಲ ಎಂಬುದು ಅಚ್ಚರಿಯ ವಿಷಯ. ಆ ನಗರದ ಸ್ವಚ್ಚತೆ, ಅಸಲಿತನ ಹಾಗೆಯೇ ಉಳಿದಿದೆ. ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದು ಎಂಬ ಹಣೆಪಟ್ಟಿಯನ್ನು ಉಳಿಸಿಕೊಂಡಿದೆ" ಎನ್ನುತ್ತಾರೆ.

ಲಂಡನ್ ನಗರದಲಿರುವ ಬಸವೇಶ್ವರ ಪ್ರತಿಮೆಯ ಎದುರು ಲಂಡನ್ ಬಸವ ಪ್ರತಿಷ್ಟಾನದಿಂದ ಗೌರವ ಸ್ವೀಕರಿಸಿರುವ ಶಿವರಾಜ್ ಕುಮಾರ್ "'ಕಾಯಕವೇ ಕೈಲಾಸ' ವಚನ ಅಲ್ಲಿ ಓದಿದಾಗ ಅತೀವ ಸಂತಸವಾಯುತು. ಈ ಪ್ರಶಸ್ತಿಗೆ ಈ ವಚನ ಸಾಂಕೇತಿಕವಾಗಿದೆ. ಈ ಪ್ರಶಸ್ತಿ ನನಗೆ ವಿಶೇಷ ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಈ ಗೌರವ ಸ್ವೀಕರಿಸಿದ ನಂತರ ನಾನೀಗೆ ಎರಡನೆಯವನಾಗಿ ಇದನ್ನು ಸ್ವೀಕರಿಸಿದ್ದೇನೆ" ಎಂದು ವಿವರಿಸುತ್ತಾರೆ.

ಅಲ್ಲದೆ ಶಿವಲಿಂಗ ಸಿನೆಮಾದ ಪ್ರದರ್ಶನದ ವೇಳೆ ಲಂಡನ್ ನಲ್ಲಿ ನೆಲೆಸಿರುವ ಉತ್ತರ ಭಾರತೀಯ ವೀರೇಂದ್ರ ಶರ್ಮ ಎನ್ನುವವರು ನಟನಿಗೆ 'ಕೋಹಿನೂರ್' ಎಂಬ ಹೊಸ ಬಿರುದು ನೀಡಿದ್ದಾರಂತೆ. "ಅವರ ಜೊತೆಗೆ ನಾನು ಸಂವಾದ ನಡೆಸುವಾಗ ಬಹಳ ಖುಷಿಯಾಯಿತು. ಅವರು ಭಾರವನ್ನು ಎಷ್ಟು ಕಳೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿಯಿತು. ಅವರು ಹಂಚಿಕೊಂಡ ಭಾವನೆಗಳು ಸುಂದರ ಮತ್ತು ಹೃದಯಸ್ಪರ್ಶಿಯಾಗಿದ್ದವು" ಎನ್ನುತ್ತಾರೆ ಶಿವಣ್ಣ.

ಕನ್ನಡ ಭಾಷೆಯ ಸಿನೆಮಾಗಳನ್ನು ಜಾಗತಿಕವಾಗಿ ಪ್ರಚಾರ ಮಾಡುವ ಉತ್ಸಾಹದಲ್ಲಿರುವ ನಟ, ಇತರ ಭಾಷಿಕರು ಹೆಚ್ಚೆಚ್ಚು ಕನ್ನಡ ಭಾಷೆಯ ಸಿನೆಮಾಗಳನ್ನು ನೋಡಲಿ ಮತ್ತು ನಮ್ಮ ರಾಜ್ಯದ ಸಂಸ್ಕೃತಿಯ ಬಗ್ಗೆ ತಿಳಿಯಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ.

ಸದ್ಯಕ್ಕೆ 'ಬಂಗಾರ S/O ಬಂಗಾರದ ಮನುಷ್ಯ' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಸೋಮವಾರದಿಂದ 'ಶ್ರೀಕಂಠ' ಸಿನೆಮಾದ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com