ಸಂಚಾರಿ ನಿಯಮ ಉಲ್ಲಂಘನೆ: ನಟ ರವಿತೇಜಾಗೆ 800 ರು. ದಂಡ

ಟಿಂಟೇಡ್ ಗ್ಲಾಸ್ ಹಾಗೂ ನಂಬರ್ ಪ್ಲೆಟ್ ದೋಷ ಹಿನ್ನಲೆ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ಸಂಚಾರಿ ಪೊಲೀಸರು ನಟ ರವಿತೇಜಾಗೆ ದಂಡ ವಿಧಿಸಿದ್ದಾರೆ...
ರವಿತೇಜಾ
ರವಿತೇಜಾ

ಹೈದರಾಬಾದ್: ಟಿಂಟೇಡ್ ಗ್ಲಾಸ್ ಹಾಗೂ ನಂಬರ್ ಪ್ಲೆಟ್ ದೋಷ ಹಿನ್ನಲೆ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ಸಂಚಾರಿ ಪೊಲೀಸರು ನಟ ರವಿತೇಜಾಗೆ ದಂಡ ವಿಧಿಸಿದ್ದಾರೆ.

ರವಿತೇಜಾ ಅವರು ತಮ್ಮ ಇನ್ನೋವಾ ಕಾರಿನ ಕಪ್ಪು ಬಣ್ಣದ ಸ್ಪಿಕ್ಟರ್ ತೆಗೆಸದೇ ಇದ್ದ ಕಾರಣಕ್ಕೆ ಪೊಲೀಸರು 700 ರುಪಾಯಿ ದಂಡ ವಿಧಿಸಿದ್ದಾರೆ. ಇನ್ನು ನಿಯಮದ ಪ್ರಕಾರ ಕಾರಿನ ನಂಬರ್ ಪ್ಲೇಟ್ ಸಹ ಇಲ್ಲದ್ದರಿಂದ 100 ರುಪಾಯಿ ದಂಡ ವಿಧಿಸಿದ್ದಾರೆ.

ಭಾರತೀಯ ವಿದ್ಯಾ ಭವನದ ಬಳಿ ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಭಾಗವಾಗಿ ತನಿಖೆ ನಡೆಸುತ್ತಿದ್ದ ವೇಳೆ ಜಿಮ್ ಮುಗಿಸಿ ಬರುತ್ತಿದ್ದ ರವಿತೇಜಾರ ಕಾರನ್ನು ನಿಲ್ಲಿಸಿ ಪರೀಕ್ಷಿಸಿದಾಗ ಲೋಪ ಇರುವುದು ಕಂಡು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com