'ಕರ್ವ' ಚಿತ್ರದ ಬಗ್ಗೆ ತಿಲಕ್ ಮಾತು

ಸ್ಟೈಲಿಶ್ ನಟರ ಸಾಲಿಗೆ ಬರುವ ನಟ ತಿಲಕ್ ಅವರು ಕನ್ನಡ ಜನರಿಗೆ ಗಂಡ ಹೆಂಡತಿ ಚಿತ್ರದ ಮೂಲಕ ಚಿರಪರಿಚಿತರಾದ ನಟ.
ನಟ ತಿಲಕ್
ನಟ ತಿಲಕ್

ಸ್ಟೈಲಿಶ್ ನಟರ ಸಾಲಿಗೆ ಬರುವ ನಟ ತಿಲಕ್ ಅವರು ಕನ್ನಡ ಜನರಿಗೆ ಗಂಡ ಹೆಂಡತಿ ಚಿತ್ರದ ಮೂಲಕ ಚಿರಪರಿಚಿತರಾದ ನಟ. ತಿಲಕ್ ಅವರು ನಟಿಸುವ ಚಿತ್ರಗಳ ಸಂಖ್ಯೆ ಕಡಿಮೆಯಾದ್ರೂ ನಿಭಾಯಸುವ ಪಾತ್ರಗಳು ಮಾತ್ರ ಅವರು ಉತ್ತಮ ಕಲಾವಿದರ ಸಾಲಿನಲ್ಲಿ ನಿಲ್ಲಿಸುತ್ತದೆ.

ತಿಲಕ್ ಅವರು ಕರ್ವ ಎಂಬ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದು, ಟ್ರೈಲರ್ ಮೂಲಕವೇ ಜನರ ಹೃದಯ ಬಡಿತವನ್ನು ಹೆಚ್ಚು ಮಾಡಿದೆ. ಈಗಾಗಲೇ 6-5=2 ಮೂಲಕ ಯಶಸ್ವೀ ಚಿತ್ರ ಕೊಟ್ಟಿರುವ ನಿರ್ಮಾಪಕ ಕೃಷ್ಣ ಚೈತನ್ಯ ಅವರು ಕರ್ವ ಚಿತ್ರದ ಹೊಣೆಹೊತ್ತಿದ್ದಾರೆ.

ಚಿತ್ರದ ಕುರಿತು ತಿಲಕ್ ಮಾತನಾಡಿದ್ದು ಹೀಗೆ
ಆರಂಭಿಕದಲ್ಲಿ ನಾನು ಎಂದಿಗೂ ಗೆಲವು ಸಾಧಿಸಿಲ್ಲ. ಆದರೆ, ಕಳೆದುಕೊಂಡಿದ್ದರ ಬಗ್ಗೆ ಕೊನೆಯಲ್ಲಿ ತಿಳಿದುಕೊಳ್ಳುತ್ತೇನೆ. ಸೋಲಿನಿಂದಲೇ ಬೆಳೆದವನು ನಾನು. ಆದರೆ, ಇದೀಗ ಉಳಿಯುವ ಹಾಗೂ ಸಮರ್ಥಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇನೆ. ಈ ಹತ್ತು ವರ್ಷದಲ್ಲಿ ಪ್ರತಿ ದಿನ ಒಂದಲ್ಲ ಒಂದು ರೀತಿಯ ನನ್ನಲ್ಲಾಗುವ ಬದಲಾವಣೆಯನ್ನು ನೋಡಿದ್ದೇನೆ. ಪ್ರತಿ ಸೆಕೆಂಡ್ ಗೂ ನನ್ನಲ್ಲಿ ಹೊಸ ಮನುಷ್ಯನನ್ನು ನೋಡುತ್ತೇನೆ.

ಉಗ್ರಂ ಚಿತ್ರ ನನ್ನ ವೃತ್ತಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು. ಒಬ್ಬ ನಟನಾಗಿ ಕರ್ವ ಚಿತ್ರ ನನ್ನನ್ನು ಹೊರಹೊಮ್ಮುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಕರ್ವ ಚಿತ್ರದಲ್ಲಿ ಉತ್ತಮವಾದ ಭಾಗವೆಂದರೆ ಚಿತ್ರಕಥೆ. ನವನೀತ್ ಅವರು ಚಿತ್ರದ ಕಥೆಯನ್ನು ಬರೆದಿದ್ದು, ಚಿತ್ರ ಖಂಡಿತವಾಗಿಯೂ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಚಿತ್ರಕಥೆಯೇ ಚಿತ್ರದ ಹೀರೋ ಇದ್ದಂತೆ. ಕರ್ವ ಚಿತ್ರದಲ್ಲಿ ನನಗೆ  ಇಷ್ಟವಾದ್ದದ್ದು ಇದೇ.

ದೆವ್ವದ ಕಥೆ ಕುರಿತಂತೆ ಮಾತನಾಡಿದ ಅವರು, ನಿಜ ಜೀವನದಲ್ಲಿ ಭೂತ, ದೆವ್ವ ಕುರಿತ ಯಾವುದೇ ಅನುಭವಗಳು ನನಗಾಗಿಲ್ಲ. ಆದರೆ, ದೆವ್ವಕ್ಕೂ ಆಕಾರ ಇದೆ ಎಂಬುದನ್ನು ನಾನು ನಂಬುತ್ತೇನೆ. ಜಗತ್ತಿನಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಇರುವಿಕೆಯ ಕುರಿತು ನಂಬಿಕೆ ಇದೆ.

ಇದೀಗ ಶಾಂತಿಯುತನಾಗಿದ್ದೇನೆಂದು ನನಗೆ ವಿಶ್ವಾಸವಿದೆ. ಮೂಢನಂಬಿಕೆಗಳು ನನ್ನ ಜೀವನದಲ್ಲಿ ಬರಲು ಸಾಧ್ಯವಿಲ್ಲ. ಚಿತ್ರವೊಂದು ಮನರಂಜನೆಗಾಗಿ ಮಾತ್ರ. ಕರ್ವ ಚಿತ್ರ ಸವಿಯಲು ರುಚಿಕರವಾಗಿದ್ದು, ಜನರಿಗೆ ಸಾಕಷ್ಟು ಮನರಂಜನೆಯನ್ನುನೀಡಲಿದೆ ಎಂದು ಹೇಳಿದ್ದಾರೆ.

ಕರ್ವ ಚಿತ್ರದ ಬಿಡುಗಡೆ ಕುರಿತು ಈಗಾಗಲೇ ಉತ್ಸಾಹದಲ್ಲಿರುವ ತಿಲಕ್ ಅವರ ಕೈಯಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳಿದ್ದು, ಪ್ರಸ್ತುತ 4 ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ.

ನವನೀತ್ ಅವರು ನಿರ್ದೇಶಿಸಿರುವ ಕರ್ವ ಚಿತ್ರವನ್ನು ಕೃಷ್ಣ ಚೈತನ್ಯ ಅವರು ನಿರ್ಮಿಸಿದ್ದಾರೆ. ಮೋಹನ್ ಕ್ಯಾಮೆರಾ ಕೈಚಳಕ ಇರುವ ಕರ್ವದಲ್ಲಿ ತಿಲಕ್, ರೋಹಿತ್, ಅನಿಶಾ, ದೇವರಾಜ್, ಅನು ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದು ಹೋಗಿವೆ. ಆದರೆ, ಕರ್ವ ಚಿತ್ರ ಜನರಿಗೆ ಇಷ್ಟವಾಗುತ್ತೆ ಎನ್ನುವ ನಂಬಿಕೆ ಚಿತ್ರ ತಂಡಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com