ಸುಳ್ಳು ಸಾವಿನ ಸುದ್ದಿ: ನಟ ಸೆಂಥಿಲ್ ರಿಂದ ದೂರು ದಾಖಲು

ತಾನು ಸತ್ತನೆಂದು ಸುಳ್ಳು ಸುದ್ದಿಯನ್ನು ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ನನ್ನ ಮನಸ್ಸಿಗೆ ಭಾರೀ ನೋವುಂಟಾಗಿದೆ ಎಂದು ತಮಿಳು ನಟ..
ಸೆಂಥಿಲ್ ಕುಮಾರ್
ಸೆಂಥಿಲ್ ಕುಮಾರ್
Updated on: 

ಮಧುರೈ: ತಾನು ಸತ್ತನೆಂದು ಸುಳ್ಳು ಸುದ್ದಿಯನ್ನು ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ನನ್ನ ಮನಸ್ಸಿಗೆ ಭಾರೀ ನೋವುಂಟಾಗಿದೆ ಎಂದು ತಮಿಳು ನಟ ಆರ್ ಸೆಂಥಿಲ್ ಹೇಳಿದ್ದಾರೆ.

ಈ ಸಂಬಂಧ ಪೊಲೀಸ್ ಕಮಿಷನರ್ ಗೆ ದೂರು ದಾಖಲಿಸಿದ ಅವರು ಈ ರೀತಿಯ ಸುದ್ದಿಗಳನ್ನು ಹರಿಯಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ರೀತಿ ವಾಟ್ಸಾಪ್ ನಲ್ಲಿ ಮೆಸೇಜ್ ಹರಿದಾಡಿದ್ದು, ಹಲವು ಮಂದಿ ತಮ್ಮನ್ನು ಸಂಪರ್ಕಿಸಿ ಸತ್ಯ ಏನು ಎಂಬುದನ್ನು ತಿಳಿದುಕೊಂಡರು ಎಂದು ಹೇಳಿದರು. ತಮ್ಮ ವಿಭಿನ್ನ ದೈಹಿಕ ಭಾಷಾ ಶೈಲಿ ಹಾಗೂ ಪಂಚಿಂಗ್ ಡೈಲಾಗ್​ಗಳಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಜನಪ್ರಿಯ ಸೆಂಥಿಲ್ 500ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com