ಟ್ವಿಟ್ಟರ್ ನಲ್ಲಿ ಅವಹೇಳನಕಾರಿ ಸಂದೇಶ: ಕರ್ನಾಟಕ ಮೂಲದ ವ್ಯಕ್ತಿ ವಿರುದ್ಧ ನಟಿ ಶೃತಿ ಹಾಸನ್ ದೂರು ಸಲ್ಲಿಕೆ

ತನ್ನ ಟ್ವಿಟ್ಟರ್ ಖಾತೆಗೆ ಅವಹೇಳನಕಾರಿ ಮತ್ತು ನಿಂದನೆಯ ಸಂದೇಶಗಳನ್ನು ಕಳುಹಿಸುತ್ತಿರುವ ಕರ್ನಾಟಕ...
ನಟಿ ಶೃತಿ ಹಾಸನ್
ನಟಿ ಶೃತಿ ಹಾಸನ್
Updated on
ಚೆನ್ನೈ: ತನ್ನ ಟ್ವಿಟ್ಟರ್ ಖಾತೆಗೆ ಅವಹೇಳನಕಾರಿ ಮತ್ತು ನಿಂದನೆಯ ಸಂದೇಶಗಳನ್ನು ಕಳುಹಿಸುತ್ತಿರುವ ಕರ್ನಾಟಕ ಮೂಲದ ವ್ಯಕ್ತಿ ವಿರುದ್ಧ ನಟಿ ಶೃತಿ ಹಾಸನ್ ದೂರು ಸಲ್ಲಿಸಿದ್ದಾರೆ.
ಚೆನ್ನೈ ಪೊಲೀಸರ ಸಹಿಯುಳ್ಳ ದೂರನ್ನು ಹೆಚ್ಚಿನ ವಿಚಾರಣೆಗೆ ಕೇಂದ್ರ ಅಪರಾಧ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಟಿಯ ಏಜೆಂಟರಾಗಿರುವ ಪ್ರವೀಣ್ ಆಂಟೊನಿ ಎಂಬುವವರು ನಿನ್ನೆ ದೂರು ದಾಖಲಿಸಿದ್ದಾರೆ.  
ಶೃತಿ ಹಾಸನ್ ತಮ್ಮ ದೂರಿನಲ್ಲಿ, ತಮ್ಮ ಟ್ವಿಟ್ಟರ್ ಖಾತೆ @Shrutihassan ನಲ್ಲಿ  ಕರ್ನಾಟಕ ಮೂಲದ ಡಾ.ಕೆ.ಜಿ.ಗುರುಪ್ರಸಾದ್ ಎಂಬ ವ್ಯಕ್ತಿ  ಕಳೆದ ಎರಡು ತಿಂಗಳಿನಿಂದ ಅವಹೇಳನಕಾರಿ ಮತ್ತು ನಿಂದನಾತ್ಮಕ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಆತ ಕರ್ನಾಟಕದ ಹಾಸನ ಇನ್ಸಿಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿರುವ ಶೃತಿ ಹಾಸನ್ ಸಂದೇಶದ ಸ್ಕ್ರೀನ್ ಶಾಟ್ ಚಿತ್ರ ತೆಗೆದು ದೂರಿನ ಜೊತೆಗೆ ಲಗತ್ತಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com