ಹಿಂದಿ ಸಿನೆಮಾಗಳಲ್ಲಿ ನಟಿಸುವುದಕ್ಕೆ ನನಗೆ ಯಾವುದೇ ತೊಂದರೆಗಳಿಲ್ಲ: ಫ್ರೀಡಾ ಪಿಂಟೋ

ಆಸ್ಕರ್ ವಿಜೇತ ಸಿನೆಮಾ 'ಸ್ಲಂಡಾಗ್ ಮಿಲಿಯನೇರ್' ಸಿನೆಮಾದ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಅಮೆರಿಕಾ ಮೂಲದ ಭಾರತೀಯ ನಟಿ ಫ್ರೀಡಾ ಪಿಂಟೋ ಹಿಂದಿ ಸಿನೆಮಾಗಳಲ್ಲಿ ಕೆಲಸ ಮಾಡಲು
ಅಮೆರಿಕಾ ಮೂಲದ ಭಾರತೀಯ ನಟಿ ಫ್ರೀಡಾ ಪಿಂಟೋ
ಅಮೆರಿಕಾ ಮೂಲದ ಭಾರತೀಯ ನಟಿ ಫ್ರೀಡಾ ಪಿಂಟೋ
Updated on
ಮುಂಬೈ: ಆಸ್ಕರ್ ವಿಜೇತ ಸಿನೆಮಾ 'ಸ್ಲಂಡಾಗ್ ಮಿಲಿಯನೇರ್' ಸಿನೆಮಾದ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಅಮೆರಿಕಾ ಮೂಲದ ಭಾರತೀಯ ನಟಿ ಫ್ರೀಡಾ ಪಿಂಟೋ ಹಿಂದಿ ಸಿನೆಮಾಗಳಲ್ಲಿ ಕೆಲಸ ಮಾಡಲು ತಮೆಗೆ ಯಾವುದೇ ತೊಂದರೆಗಳಲ್ಲಿ ಎಂದಿದ್ದಾರೆ. 
"ಹಿಂದಿ ಭಾಷೆಯ ಸಿನೆಮಾಗಳಲ್ಲಿ ನಟಿಸುವುದಕ್ಕೆ ನನಗೆ ಯಾವುದೇ ತೊಂದರೆಗಳಿಲ್ಲ. ನನಗೆ ಭಾಷೆ ಬರದೇ ಇದ್ದರು ಅರ್ಧ ಮಾರ್ವಾರಿ ಸಿನೆಮಾ 'ತ್ರಿಶನ'ದಲ್ಲಿ ಕೆಲಸ ಮಾಡಿದ್ದೇನೆ. ಅದಕ್ಕಾಗಿ ನಾನು ಭಾಷೆ ಕಲಿಯಬೇಕಾಗಿ ಬಂತು" ಎನ್ನುತ್ತಾರೆ ನಟಿ. 
"ನನಗೆ ಸಿನೆಮಾದಲ್ಲಿ ಯಾರಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ ಆದರೆ ಕಥೆ ನನಗೆ ಪ್ರಮುಖ" ಎಂದು ತಿಳಿಸುತ್ತಾರೆ ಪಿಂಟೋ. 
"ಭಾರತದಲ್ಲಿ ಮಹಿಳೆಯರು: ಕೇಳದ ಕಥೆಗಳು" ಎಂಬ ಗೂಗಲ್ ಏರ್ಪಡಿಸಿದ್ದ ಕಾರ್ಯಕ್ರಮಮದಲ್ಲಿ ಫ್ರೀಡಾ ಮಾತನಾಡುತ್ತಿದ್ದರು. 
ಅವರ ಮುಂದಿನ ಸಿನೆಮಾದ ಬಗ್ಗೆ ಮಾತನಾಡಿದ ೩೨ ವರ್ಷದ ನಟಿ "ಮುಂದಿನ ವರ್ಷ ಬಿಡುಗಡೆಯಾಗಲಿರುವ ಒಂದು ಅದ್ಭುತ ಸಿನೆಮಾದಲ್ಲಿ ನಟಿಸಿದ್ದೇನೆ. ಇದನ್ನು ತಬ್ರೇಜ್ ನೂರಾನಿ ನಿರ್ದೇಶಿಸಿದ್ದಾರೆ. ಅವರು ಕೂಡ ಭಾರತೀಯ. ಅವರು 'ಸ್ಲಂಡಾಗ್ ಮಿಲಿಯನೇರ್' ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರು. ಅವರು 'ಲವ್ ಸೋನಿಯಾ' ಎಂಬ ಸಿನೆಮಾ ಕೂಡ ನಿರ್ದೇಶಿಸಿದ್ದರು. ಅದರಲ್ಲಿ ಅನುಪಮ್ ಖೇರ್ ಮತ್ತು ಆದಿಲ್ ಹುಸೇನ್ ನಟಿಸಿದ್ದರು. ನಾನು ಹಿಂದಿ ಸಿನೆಮಾಗಳಲ್ಲಿ ಕೂಡ ನಟಿಸಲಿದ್ದೇನೆ ಮತ್ತು ಹಿಂದಿ ಮಾತನಾಡಬಲ್ಲೆ" ಎಂದು ನಟಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com