ಸುದೀಪ್
ಸಿನಿಮಾ ಸುದ್ದಿ
ಬಿಗ್ ಬಾಸ್ ಸ್ಪರ್ಧಿಗಳಿಗೆ ರುಚಿರುಚಿಯಾದ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ ಸೀಸನ್-4 ಸ್ಪರ್ಧಿಗಳಿಗೆ ನಟ ಕಿಚ್ಚ ಸುದೀಪ್ ಸೆಟ್ ನಲ್ಲಿಯೇ ರುಚಿ ರುಚಿಯಾದ ಅಡುಗೆ ಮಾಡಿ ..
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-4 ಸ್ಪರ್ಧಿಗಳಿಗೆ ನಟ ಕಿಚ್ಚ ಸುದೀಪ್ ಸೆಟ್ ನಲ್ಲಿಯೇ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮ 50ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸೆಟ್ ನಲ್ಲಿಯೇ ಸುದೀಪ್ ಅಡುಗೆ ಮಾಡಿ ಸ್ಪರ್ಧಿಗಳಿಗೆ ತಮ್ಮ ಕೈರುಚಿ ತೋರಿಸಿದರು.
ಇತ್ತೀಚೆಗೆ ಬಿಗ್‌ಬಾಸ್ ಸೆಟ್‌ನಲ್ಲಿ ಸುದೀಪ್, ವೆಜ್‌ಬಿರಿಯಾನಿ, ಚಿಕನ್ ಬಿರಿಯಾನಿ, ಮಂಗಳೂರು ಬಜ್ಜಿ, ಚಿಲ್ಲಿ ಪನ್ನೀರ್, ಚೀಸ್ ಎಗ್, ಮಾರ್ಬಲ್ ಕೇಕ್ ಸೇರಿದಂತೆ ಇನ್ನಿತರೆ ತಿನಿಸುಗಳನ್ನು ಕೈಯಾರೆ ತಯಾರಿಸಿ ಕೊಟ್ಟರು. ಯಾವ್ಯಾವ ಸ್ಪರ್ಧಿಗಳಿಗೆ ಏನೇನು ತಿನಿಸೆಂದು ಅವರ ಹೆಸರುಗಳನ್ನು ಸೂಚಿಸಿ, ಅದನ್ನು ನೀಟಾಗಿ ಪ್ಯಾಕ್ ಮಾಡಿ ಬಿಗ್‌ಬಾಸ್ ಮನೆಗೆ ಕಳುಹಿಸಿಕೊಟ್ಟರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ