ಆರಂಭಕ್ಕೂ ಮುನ್ನವೇ ಬಿಗ್'ಬಾಸ್-4 ಸ್ಪರ್ಧಿಗಳ ಹೆಸರು ಬಹಿರಂಗ

ಆರಂಭಕ್ಕೂ ಮುನ್ನವೇ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್'ಬಾಸ್-4ರ ಸ್ಪರ್ಧಾಳುಗಳ ಹೆಸರು ಇದೀಗ ಬಹಿರಂಗಗೊಂಡಿದೆ...
ಆರಂಭಕ್ಕೂ ಮುನ್ನವೇ ಬಿಗ್'ಬಾಸ್-4 ಸ್ಪರ್ಧಿಗಳ ಹೆಸರು ಬಹಿರಂಗ
ಆರಂಭಕ್ಕೂ ಮುನ್ನವೇ ಬಿಗ್'ಬಾಸ್-4 ಸ್ಪರ್ಧಿಗಳ ಹೆಸರು ಬಹಿರಂಗ
Updated on

ಬೆಂಗಳೂರು: ಆರಂಭಕ್ಕೂ ಮುನ್ನವೇ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್'ಬಾಸ್-4ರ ಸ್ಪರ್ಧಾಳುಗಳ ಹೆಸರು ಇದೀಗ ಬಹಿರಂಗಗೊಂಡಿದೆ.

ಬಿಗ್ ಬಾಸ್- 4ರಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಹೆಸರು ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿ ಕಾಡುತ್ತಿರುತ್ತದೆ. ಇದರಂತೆ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಕೂಡ ಸಾಕಷ್ಟು ಗೌಪ್ಯತೆಗಳನ್ನು ಕಾಪಾಡಿಕೊಂಡು ಬಂದಿದ್ದರು. ಕಾರ್ಯಕ್ರಮ ಆರಂಭ ಪ್ರಕ್ರಿಯೆಗಳನ್ನು ಸಾಕಷ್ಟು ತಿಂಗಳಿಂದ ಮಾಡುತ್ತಿದ್ದರೂ, ಸ್ಪರ್ಧಾಳುಗಳ ಹೆಸರನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.

ಆದರೆ, ಕಾರ್ಯಕ್ರಮ ಆರಂಭವಾಗಲು ಇನ್ನು ಒಂದು ದಿನ ಬಾಕಿಯಿರುವಾಗಲೇ ಇದೀಗ ಸ್ಪರ್ಧಾಳುಗಳ ಹೆಸರಿನ ಪಟ್ಟಿ ಬಹಿರಂಗಗೊಂಡಿದೆ. ಇದರಂತೆ ಜನರ ಕುತೂಹಲಕ್ಕೂ ತೆರೆಬಿದ್ದಂತಾಗಿದೆ. ಸ್ಪರ್ಧಾಳುಗಳ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ತಮ್ಮ ತಮ್ಮ ನೆಚ್ಚಿನ ವ್ಯಕ್ತಿಗಳಿಗೆ ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ.

ಬಿಗ್ ಬಾಸ್-4ಕ್ಕೆ ಚಲನಚಿತ್ರ ನಟ, ನಟಿ, ಪೋಷಕ ಪಾತ್ರಧಾರಿ, ಹಳೆಯ ನಟ/ನಟಿ, ನಿರ್ದೇಶಕ, ನಿರೂಪಕ/ನಿರೂಪಕಿ, ಆಧ್ಯಾತ್ಮ ಚಿಂತಕ, ಕಿರುತೆರೆ ಕಲಾವಿದರು, ಪತ್ರಕರ್ತ, ರೇಡಿಯೋ ಜಾಕಿ, ಕ್ರಿಕೆಟರ್, ಕಲಾವಿದ, ರೂಪದರ್ಶಿ, ವಿವಾದಿತ ವ್ಯಕ್ತಿಗಳು ಹಾಗೂ ವಿವಿಧ ಕ್ಷೇತ್ರಗಳನ್ನು ಪಟ್ಟಿ ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

ಸೋರಿಕೆಯಾಗಿರುವ ಸ್ಪರ್ಧಾಳುಗಳು ಪಟ್ಟಿ ಈ ಕೆಳಗಿನಂತಿದೆ.

  1. ಕನ್ನಡ ಹಾಗೂ ಇನ್ನಿತರೆ ಭಾಷೆಗಳ ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡುತ್ತಿರುವ ಹಾಗೂ ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್.
  2. ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಕಾರಣ್ಯ ರಾಮ್.
  3. ತಮ್ಮ ಹಾಸ್ಯದ ಮೂಲಕ ಕನ್ನಡ ಜನತೆಯ ಮನಗೆದ್ದಿರುವ ಹಾಸ್ಯ ನಟ ಮೋಹನ್ ಅಲಿಯಾಸ್ ಮೋಹನ್ ಶಂಕರ್.
  4. ತಮ್ಮ ವಿಶಿಷ್ಟ ಗಾಯನದ ಮೂಲಕ ಹೆಸರು ಮಾಡಿರುವ ಗಾಯಕಿ ಚೈತ್ರಾ.
  5. ಟಿವಿ9 ಸುದ್ದಿ ವಾಹಿನಿ ಮೂಲಕ ನಿರೂಪಕಿಯಾಗಿ ಖ್ಯಾತಿ ಪಡೆದಿರುವ ನಟಿ ಹಾಗೂ ನಿರೂಪಕಿ ಶೀತಲ್ ಶೆಟ್ಟಿ.
  6. ಸ್ಪರ್ಶ ಚಿತ್ರದ ಮೂಲಕ ಖ್ಯಾತಿಗಳಿಸಿ ಕನ್ನಡ ಚಿತ್ರರಂಗದಿಂದ ಸದ್ದಿಲ್ಲದೆ ಹಿಂದೆ ಸರಿದಿದ್ದ ನಟಿ ರೇಖಾ.
  7. 'ದೇವ್ರಾಣೆ ಬಿಡು ಗುರು' ಚಿತ್ರದ ಖ್ಯಾತ ನಿರ್ದೇಶಕ ಪ್ರಥಮ್.
  8. ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಕನ್ನಡಿಗರ ಮನಗೆದ್ದಿರುವ ನಟ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ.
  9. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿರುವ, ಹವ್ಯಾಸಿ ಬರಹಗಾರ ಕಿರಿಕ್ ಕೀರ್ತಿ.
  10. ಸಾಕಷ್ಟು ಧಾರಾವಾಹಿಗಳಲ್ಲಿ ಪಾತ್ರ ಮಾಡಿ, ಕಿರುತೆರೆ ಲೋಕದ ತಾರೆ ಎನಿಸಿಕೊಂಡಿರುವ ಖ್ಯಾತ ಕಿರುತೆರೆ ನಟಿ ವಾಣಿಶ್ರೀ.
  11. ಕನ್ನಡ ಕಿರುತೆರೆ ನಟಿ ಸಂಜನಾ.
  12. ಬಹುಭಾಷಾ ನಟಿ ಹಾಗೂ ನೃತ್ಯಗಾತಿ ಕಾವ್ಯ ಶಾ.
  13. ರಿಯಾಲಿಟಿ ಶೋ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟ ಭುವನ್ ಪೊನ್ನಣ್ಣ.
  14. ಮಾಜಿ ಕ್ರಿಕೆಟಿಗ ಹಾಗೂ ಜೆಡಿಎಸ್ ಸದಸ್ಯರಾಗಿರುವ ದೊಡ್ಡ ಗಣೇಶ್.
  15. ಖಾಸಗಿ ವಾಹಿನಿಯ ಖ್ಯಾತ ಧಾರಾವಾಹಿ ಪಾಪಾ ಪಾಂಡು ಮೂಲಕ ಕನ್ನಡಿಗರ ಮನ ಗೆದ್ದು ಮನೆ ಮಾತಾಗಿರುವ ಹಾಸ್ಯ ನಟಿ ಶಾಲಿನಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com