
ನಾಲ್ಕನೇ ಆವೃತ್ತಿಯ ಕನ್ನಡದ ಬಿಗ್‌ಬಾಸ್ ಮನೆಯಿಂದ 2ನೇ ವಾರ ಕ್ರಿಕೆಟಿಗ ದೊಡ್ಡ ಗಣೇಶ್ ಹೊರಬಂದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಅಂತಹ ಯಾವುದೇ ಕಾಂಟ್ರವರ್ಸಿಗಳಿಗೆ ಸಿಕ್ಕಹಾಕಿಕೊಳ್ಳದ ಗಣೇಶ್ ಅವರು ಸ್ವಲ್ಪ ಸಪ್ಪೆಯಂತೆ ಕಾಣಿಸುತ್ತಿದ್ದು 2ನೇ ವಾರವೇ ಮನೆಯಿಂದ ಹೊರಬಂದಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ವೇಳೆ ಗಣೇಶ್ ಅವರಿಗೆ ಬಿಗ್‌ಬಾಸ್ ವಿಶೇಷ ಅಧಿಕಾರವನ್ನು ನೀಡಿದರು. ಅದರಂತೆ ಗಣೇಶ್ ಹೇಳುವ ವ್ಯಕ್ತಿ ಸ್ಟ್ರೆಚರ್ ನಲ್ಲೇ ಆಚೀಚೆ ಓಡಾಡಬೇಕಿತ್ತು. ಇದಕ್ಕೆ ಗಣೇಶ್ ಅವರು ಪ್ರಥಮ್ ಹೆಸರು ಸೂಚಿಸಿದರು.
ಈ ಬಾರಿ ಪ್ರಥಮ್, ಶೀತಲ್, ದೊಡ್ಡ ಗಣೇಶ್, ಕಾವ್ಯ ಹಾಗೂ ಸಂಜನ ಬಿಗ್‌ಬಾಸ್ ಎಲಿಮಿನೇಷನ್ ಲಿಸ್ಟ್ ನಲ್ಲಿ ಇದ್ದರು.
Advertisement