ದೀಪಿಕಾ ಮತ್ತೆ ನನ್ನದು ಅದ್ಭುತವಾದ ನ್ಯಾಚುರಲ್ ಕೆಮಿಸ್ಟ್ರಿ: ವಿನ್ ಡೀಸೆಲ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜಾಗತಿಕ ಸ್ಟಾರ್ ಆಗುತ್ತಾರೆ. ನಮ್ಮಿಬ್ಬರದು ಅದ್ಭುತವಾದ ಕೆಮಿಸ್ಟ್ರಿ ಎಂದು XXX ದಿ ರಿಟರ್ನ್ ಆಫ್ ಝೆಂಡರ್ ..
ದೀಪಿಕಾ ಪಡುಕೋಣೆ ಮತ್ತು ವಿನ್ ಡಿಸೇಲ್
ದೀಪಿಕಾ ಪಡುಕೋಣೆ ಮತ್ತು ವಿನ್ ಡಿಸೇಲ್

ಲಾಸ್ ಏಂಜಲೀಸ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜಾಗತಿಕ ಸ್ಟಾರ್ ಆಗುತ್ತಾರೆ. ನಮ್ಮಿಬ್ಬರದು ಅದ್ಭುತವಾದ ಕೆಮಿಸ್ಟ್ರಿ ಎಂದು XXX ದಿ ರಿಟರ್ನ್ ಆಫ್ ಝೆಂಡರ್ ಕೇಗ್'ಚಿತ್ರದ ನಟ ವಿನ್ ಡಿಸೇಲ್ ಹೇಳಿದ್ದಾರೆ.

ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ, ನಮ್ಮಿಬ್ಬರದು ನ್ಯಾಚುರಲ್ ಕೆಮಿಸ್ಟ್ರಿ, ಆಕೆಯ ಜೊತೆ ಕಳೆದ ಕ್ಷಣಗಳು ತುಂಬಾ ಸುಂದರವಾಗಿದ್ದವು ಎಂದು 49 ವರ್ಷದ ವಿನ್ ಡೀಸೆಲ್ ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಂದರ್ಶನದುದ್ದಕ್ಕೂ ದೀಪಿಕಾಳನ್ನು ಹೊಗಳಿರುವ ಡೀಸೆಲ್ ಅಕೆಯೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ ಎಂದು ಹೇಳಿದ್ದಾರೆ. ಆಕೆಯ ಜೊತೆಗಿನ ಪ್ರತಿ ಕ್ಷಣವನ್ನು ನಾನು ಪ್ರೀತಿಸುತ್ತೇನೆ, ಆಕೆಯ ಬಗೆಗಿನ ಪ್ರೀತಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ವೇಳೆ ವಿಡಿಯೋ ಮೂಲಕ ದೀಪಿಕಾ ಕೇಳಿದ ಪ್ರಶ್ನೆ ಕೇಳಿದರು,ಶೂಟಿಂಗ್ ನಲ್ಲಿ ಯಾವ ಸನ್ನಿವೇಶ ಇಷ್ಟ ಆಯಿತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೀಸೆಲ್ ನೀರಿನ ಬಳಿ ನಡೆದ ಚಿತ್ರೀಕರಣ ನನಗೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.

ದೀಪಿಕಾ ನನಗೆ ತುಂಬಾ ವಿಶೇಷವಾದ ವ್ಯಕ್ತಿ, ಭಾರತದಿಂದ ಬಂದ ಮುಂದಿನ ಜಾಗತಿಕ ಎಂದು ಹೊಗಳಿದ್ದಾರೆ. ವಿನ್ ಡಿಸೆಲ್ ಮತ್ತು ದೀಪಿಕಾ ಅಭಿನಯದ  'XXX ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರ ಜನವರಿ 20 2017ಕ್ಕೆ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com