ವರ್ತಮಾನದಲ್ಲೇ ದೇವರಿದ್ದಾನೆ; ನಾವು ನೋಡಲು ಸೋತಿದ್ದೇವೆ: ಉಪ್ಪಿ ಉವಾಚ
ದೇವರು, ಆಸ್ತಿಕತೆ, ನಾಸ್ತಿಕತೆಯ ಸುತ್ತ ಸುತ್ತಿದ್ದ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಟನೆಯ 'ಓ ಮೈ ಗಾಡ್' ಚಿತ್ರರಸಿಕರನ್ನು ಸೆಳೆದಿತ್ತು. ಈಗ ಈ ವಿಡಂಬನಾತ್ಮಕ ಚಿತ್ರ ಕನ್ನಡಕ್ಕೆ ರಿಮೇಕ್
ಬೆಂಗಳೂರು: ದೇವರು, ಆಸ್ತಿಕತೆ, ನಾಸ್ತಿಕತೆಯ ಸುತ್ತ ಸುತ್ತಿದ್ದ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಟನೆಯ 'ಓ ಮೈ ಗಾಡ್' ಚಿತ್ರರಸಿಕರನ್ನು ಸೆಳೆದಿತ್ತು. ಈಗ ಈ ವಿಡಂಬನಾತ್ಮಕ ಚಿತ್ರ ಕನ್ನಡಕ್ಕೆ ರಿಮೇಕ್ ಆಗಿದ್ದು, ಉಪೇಂದ್ರ ಮತ್ತು ಸುದೀಪ್ ಜೋಡಿ ಮೋಡಿ ಮಾಡಲಿದೆ ಎನ್ನಲಾಗುತ್ತಿದೆ.
'ಮುಕುಂದ ಮುರಾರಿ' ಚಿತ್ರದ ಬಗ್ಗೆ ಮಾತಿಗಿಳಿಯುವ ನಟ ಉಪೇಂದ್ರ ಇದು ಈಗಾಗಲೇ ಯಶಸ್ವಿಯಾಗಿರುವ ಸ್ಕ್ರಿಪ್ಟ್ ಮತ್ತು ಇದರ ಯಶಸ್ಸು ಇರುವುದು ವಿಷಯದ ಗಾಢತೆಯಲ್ಲಿ ಎನ್ನುವ ಅವರು "ಸಿನೆಮಾದಲ್ಲಿ ನಾನು ಮಾಡಿರುವ ಪಾತ್ರ ನನಗೆ ಬಹಳ ಆಪ್ತವಾದದ್ದು" ಎನ್ನುತ್ತಾರೆ.
ಈ ಪಾತ್ರ ತಮ್ಮ ನಿಜ ಜೀವನಕ್ಕೂ ಹತ್ತಿರವಾದದ್ದು ಎನ್ನುವ ಅವರು "ಕೆಲವು ಪಾತ್ರಗಳು ನಮಗಾಗಿಯೇ ಜನಿಸಿರುತ್ತವೆ, ನಾವು ಅವುಗಳನ್ನು ಹುಡುಕಿ ಹೋಗಬೇಕಿಲ್ಲ. ಅವುಗಳೇ ನಮ್ಮ ತೊಡೆಯ ಮೇಲೆ ಬೀಳುತ್ತವೆ. ಈ ನಿಟ್ಟಿನಲ್ಲಿ ಈ ಪಾತ್ರ ಗಳಿಸಲು ನಾನು ಅದೃಷ್ಟವಂತ" ಎನ್ನುತ್ತಾರೆ.
ದೇವರನ್ನೇ ಕಟಕಟೆಗೆ ಎಳೆದು ತರುವ ಪಾತ್ರ ಪೋಷಿಸರುವ ಉಪೇಂದ್ರ ಅವರನ್ನು ನಿಮ್ಮ ನಿಜ ಜೀವನದಲ್ಲಿ ದೇವರ ಬಗ್ಗೆ ಅನಿಸಿಕೆಯೇನು ಎಂದರೆ "ಕೊನೆಗೆ ದೇವರನ್ನು ನಾವೇ ಸೃಷ್ಟಿಸಿರುವುದು. ನಮ್ಮ ಸೃಷ್ಟಿ ಮತ್ತು ದೈವಿಕ ಶಕ್ತಿಯ ನಡುವೆ ಬಹಳ ವ್ಯತ್ಯಾಸವಿದೆ" ಎನ್ನುವ ಅವರು ಜೋಕ್ ಹೇಳುವ ಮೂಲಕ ವಿವರಿಸುತ್ತಾರೆ.
"ದೇವರು ಮತ್ತು ಮನುಷ್ಯ ಮೊದಲ ಬಾರಿಗೆ ಭೇಟಿ ಮಾಡಿದಾಗ ಇಬ್ಬರೂ 'ಓ ನನ್ನನ್ನು ಸೃಷ್ಟಿಸಿದವನೇ' ಎಂದು ಉದ್ಘಾರ ತೆಗೆಯುತ್ತಾರಂತೆ" ಎನ್ನುವ ಅವರು "ದೇವರು ನಾವು ನೋಡುವುದಕ್ಕಿಂತಲೂ ಮಾತಾಡುವುದಕ್ಕಿಂತಲೂ ಬೇರೇನೋ ದಿವ್ಯ ಶಕ್ತಿ" ಎನ್ನುತ್ತಾರೆ.
ನ್ಯಾಯ ಒದಗಿಸುವ ಮೇಲೊಂದು ಶಕ್ತಿ ಇರುವುದನ್ನು ನೀವು ನಂಬುತ್ತೀರಾ ಎಂಬ ಪ್ರಶ್ನೆಗೆ "ಅದು ನಮ್ಮ ಕಣ್ಣ ಮುಂದೆಯೇ ಇದೆ. ಸತ್ಯ ಇಂದಿಗೂ ಗೋಜಲು. ಮನುಷ್ಯರಾಗಿ ನಾವು ಸದಾ ದೇವರ, ಸತ್ಯದ ಮತ್ತು ಪ್ರೀತಿಯ ಹುಡುಕಾಟದಲ್ಲಿರುತ್ತೇವೆ. ಅವೆಲ್ಲವೂ ನಮ್ಮ ಕಣ್ಣ ಮುಂದೆಯೇ ಇದ್ದರು ಅವುಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಇದು ದೇವರ ಅಥವಾ ದೈವಿಕ ಶಕ್ತಿಯ ತೊಂದರೆ ಅಲ್ಲ ನಮ್ಮಲ್ಲಿರುವ ದೋಷ. ಎಲ್ಲವು ವರ್ತಮಾನದಲ್ಲಿಯೇ ಇದೆ ಆದರೆ ಅದನ್ನು ವಿವರಿಸುವುದಕ್ಕೆ ಸಾಧ್ಯವಿಲ್ಲ" ಎನ್ನುತ್ತಾರೆ.
ಕರ್ಮ ಸಿದ್ಧಾಂತವನ್ನು ನಂಬುವ ಉಪ್ಪಿ "ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎನ್ನುವ ಅವರು "ನಾವು ಯಾರಿಗಾದರೂ ಹಾನಿ ಮಾಡಿದರೆ ಅದು ನಮ್ಮನ್ನು ಹುಡುಕಿಕೊಂಡು ಬರದೇ ಇರದು, ಇಲ್ಲದಿದ್ದರೆ ಜೀವನದಲ್ಲಿ ತರ್ಕವೇ ಇಲ್ಲ.. ಕೇವಲ ಬುದ್ಧಿವಂತಿಕೆ ಮಾತ್ರ ಕೆಲಸ ಮಾಡಿದ್ದರೆ, ಈ ವಿಶ್ವ ಬೇರೇನೋ ಆಗಿರುತ್ತಿತ್ತು. ನನ್ನ ಪ್ರಕಾರ ಒಳ್ಳೆಯವನಾಗಿರುವುದು ಈ ಭೂಮಿಯ ಮೇಲೆ ಅತಿ ಬುದ್ಧಿವಂತಿಕೆಯ ಸಂಗತಿ" ಎನ್ನುತ್ತಾರೆ.
ಅವರು ತಾವು ದೇವರನ್ನು ನಂಬುವುದಿಲ್ಲ ಎಂಬುದನ್ನು "ದೇವರು ವೈಯಕ್ತಿಕ ಅನುಭವ" ಎಂಬ ಮಾತುಗಳ ಮೂಲಕ ಕಟ್ಟಿಕೊಡುತ್ತಾರೆ.
"ಆಸೆ ಮತ್ತು ಭಯವನ್ನು ತೊರೆದರೆ ವ್ಯಕ್ತಿ ದೇವರಾಗುತ್ತಾನೆ, ಏಕೆಂದರೆ ಆಗ ಅವನು ಜೀವನದ ಪ್ರತಿ ಗಳಿಗೆಯನ್ನು ಆಸ್ವಾದಿಸುತ್ತಾನೆ... ನಾವೆಲ್ಲಾ ಜೀವನಕ್ಕೆ ಏನೋ ಗುರಿಯಿದೆ ಎಂದು ನಂಬುತ್ತೇವೆ ಆದರೆ ಅದು ಆಗಲೇ ಪೂರ್ವನಿಯೋಜಿತವಾಗಿದೆ. ನೀವು ಕೇಳಿದರೆ ನಮ್ಮ ಜೀವನವೆಲ್ಲವು ಮಾಂತ್ರಿಕ ಶಕ್ತಿಯಂತೆ ಆದರೆ ನಾವು ಅದನ್ನು ತರ್ಕ ಮತ್ತು ಕಾರಣದ ಮೂಲ ಹಾಳುಗೆಡವಿ ಬುದ್ಧಿವಂತಿಕೆಯ ಪ್ರದರ್ಶನದಿಂದ ಅದನ್ನು ಮರೆಮಾಚಲು ಪ್ರಯತ್ನಿಸುತ್ತೇವೆ" ಎಂದು ತಮ್ಮ ಜೀವನ ತತ್ವವನ್ನು ಬಿಚ್ಚಿಡುತ್ತಾರೆ ಉಪ್ಪಿ.