ಬಾಕ್ಸ್ ಆಫೀಸ್‍ನಲ್ಲಿ ಮುಂಗಾರು ಮಳೆ-2 ಅಬ್ಬರ; 2 ದಿನಕ್ಕೆ 10 ಕೋಟಿ ಕಲೆಕ್ಷನ್?

ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ ಮುಂಗಾರು ಮಳೆ-2 ಚಿತ್ರ ಕಳೆದ ಶನಿವಾರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ...
ಮುಂಗಾರು ಮಳೆ-2
ಮುಂಗಾರು ಮಳೆ-2
ಬೆಂಗಳೂರು: ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ ಮುಂಗಾರು ಮಳೆ-2 ಚಿತ್ರ ಕಳೆದ ಶನಿವಾರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.
ವಿಶ್ವದಾದ್ಯಂತ ಸರಿಸುಮಾರು 300 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿರುವ ಚಿತ್ರ 2 ದಿನಗದಲ್ಲಿ ಬರೋಬ್ಬರಿ 10 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಈ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿಶಾ ಶೆಟ್ಟಿ ಜೋಡಿ ಜನರನ್ನು ಸೆಳೆಯುತ್ತಿದೆ. 
ಕಾವೇರಿ ಬಂದ್ ಹಿನ್ನೆಲೆಯ ಒಂದು ದಿನ ತಡವಾಗಿ ಬಿಡುಗಡೆಗೊಂಡಿದ್ದ ಮುಂಗಾರು ಮಳೆ-2 ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ತೆರೆಕಂಡ ಮೊದಲ ದಿನ ಬರೋಬ್ಬರಿ 5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಗಣೇಶ್ ಹೊಸ ದಾಖಲೆ ಮಾಡಿದ್ದಾರೆ. 
ಅರ್ಜುನ್ ಜನ್ಯ ಸಂಯೋಜಿಸಿರುವ ಇಂಪಾದ ಹಾಡುಗಳು ಅದ್ಭುತ ಲೋಕೇಶ್ ನಗಳು ಪ್ರೇಕ್ಷಕರಿಗೆ ಹುಚ್ಚು ಹಿಡಿಸುತ್ತಿದೆ. ಮುಂಗಾರು ಮಳೆ-2 ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದು, ಗಣೇಶ್ ಗೆ ತಂದೆಯಾಗಿ ರವಿಚಂದ್ರನ್ ಅಭಿನಯ ಅದ್ಭುತ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com