ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ನಟಿಸುತ್ತಿರುವ ಮುಕುಂದ ಮುರಾರಿ ಚಿತ್ರದಲ್ಲಿ ಭಾವನ ಮತ್ತು ರಚಿತಾ ರಾಂ ಸಖತ್ ಸ್ಟೆಪ್ ಹಾಕಿದ್ದಾರೆ.
ಮುಕುಂದ ಮುರಾರಿ ಚಿತ್ರದಲ್ಲಿ ಸುದೀಪ್ ಕೃಷ್ಣ ಪಾತ್ರದಲ್ಲಿ ನಟಿಸುತ್ತಿದ್ದು ಸುದೀಪ್ ಕ್ಕಾಗೆ ಮಾಡಿರುವ ವಿಶೇಷ ಹಾಡಿನಲ್ಲಿ ಭಾವನ ಮತ್ತು ರಚಿತಾ ರಾಂ ಇಬ್ಬರು ಒಟ್ಟಿಗೆ ಸ್ಟೆಪ್ ಹಾಕಿದ್ದಾರೆ.
ಬೆಂಗಳೂರಿನ ಹೊರವಲಯ ನೆಲಮಂಗಲದ ಮೋಹನ್ ಸ್ಟುಡಿಯೋದಲ್ಲಿ ಹಾಕಲಾಗಿರುವ ಭರ್ಜರಿ ಸೆಟ್ ನಲ್ಲಿ ಕೊರಿಯೋಗ್ರಾಫರ್ ಹರ್ಷ ಹಾಡಿನ ಚಿತ್ರವನ್ನು ನಿರ್ದೇಶಿಸಿದರು.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸಿದ್ದ ಬ್ಲಾಕ್ ಬಸ್ಟರ್ ಓ ಮೈ ಗಾಡ್ ಚಿತ್ರದ ರಿಮೇಕ್ ಇದಾಗಿದ್ದು, ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ನಂದ ಕಿಶೋರ್ ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಮೂಡಿಸಿದೆ.